ಬೀದಿಯಲ್ಲಿ ಮುತ್ತಿಕ್ಕಿಕೊಂಡ 'ಟ್ರಂಪ್', 'ಕಿಮ್ ಜಾಂಗ್ ಉನ್' !
.jpeg)
ಹಾಂಗ್ ಕಾಂಗ್,ಜ.26 : ನಗರದ ಜನನಿಬಿಡ ರಸ್ತೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಒಬ್ಬರನ್ನೊಬ್ಬರು ತಬ್ಬಿಕೊಂಡು ಮುತ್ತಿಕ್ಕಿಕೊಂಡು ಬುಧವಾರ ನಡೆದುಕೊಂಡುಹೋಗುತ್ತಿದ್ದುದನ್ನು ನೋಡಿ ಜನರು ಅವಾಕ್ಕಾಗಿದ್ದರು.
ಟ್ರಂಪ್ ಅಮೇರಿಕದಿಂದ ಹಾಂಕ್‌ಕಾಂಗ್ ಗೆ ಹೇಗೆ ಹಾರಿ ಬಂದರು ಎಂದು ಯೋಚಿಸುತ್ತಿದ್ದೀರಾ ? ಟ್ರಂಪ್ ಹಾಗೂ ಕಿಮ್ ಜಾಂಗ್ ಅವರನ್ನೇ ಹೋಲುವ ಅವರ ತದ್ರೂಪದಂತಿರುವ ಇಬ್ಬರು ವ್ಯಕ್ತಿಗಳು ನಡೆಸಿದ ಪ್ರಹಸನ ಇದಾಗಿತ್ತು.
ಕಿಮ್ ಅವರನ್ನೇ ಹೋಲುವ ಹಾಂಕ್ ಗಾಂಗ್ ನಿವಾಸಿ, ಆಸ್ಟ್ರೇಲಿಯಾ ಮೂಲದಸಂಗೀತಗಾರ ತನ್ನನ್ನು ಹೌವರ್ಡ್ ಎಂದಷ್ಟೇ ಪರಿಚಯಿಸಿಕೊಂಡಿದ್ದಾರೆ. ಉತ್ತರ ಕೊರಿಯಾದ ನಾಯಕನ ಟ್ರೇಡ್ ಮಾರ್ಕ್ ಕಪ್ಪು ಬಣ್ಣದ ಸಮವಸ್ತ್ರ ಧರಿಸಿದ್ದ ಅವರು ‘‘ಡೈ ಅಮೇರಿಕ ಡೈ’’ ಎಂದು ಬೊಬ್ಬೆ ಹೊಡೆಯುತ್ತಿದ್ದರು.
ಟ್ರಂಪ್ ಅವರನ್ನೇ ಹೋಲುವ ವ್ಯಕ್ತಿಯ ಹೆಸರುಡೆನ್ನಿಸ್ ಅಲನ್ (66). ಈಗ ಅಮೇರಿಕದ ಸಂಗೀತಗಾರ. ಕಿಮ್ ತನ್ನನ್ನು ಅವಮಾನಿಸಿ ನೀಡಿದ ಹೇಳಿಕೆಗಳನ್ನೆಲ್ಲಾ ಸಹಿಸಿಕೊಂಡಿದ್ದರು.
ಹೌವರ್ಡ್ ಅವರನ್ನು ಹೋಲಿಸಿದಾಗ ಅಲನ್ ಅವರಿಗೆ ಟ್ರಂಪ್ ಅವರ ತದ್ರೂಪದಂತೆಯೇ ಕಾಣಲು ಮೂರು ಬಾರಿ ಹೆಚ್ಚುವರಿ ಮೇಕಪ್ ಮಾಡಬೇಕಾಯಿತಂತೆ. ಎರಡು ದೇಶಗಳೂ ಸರ್ವಾಧಿಕಾರಿಗಳ ಆಡಳಿತದಲ್ಲಿರುವುದರಿಂದ ಅವುಗಳು ಈಗ ಸ್ನೇಹಿತರಾಗಬಹುದೆಂದು ‘ಕಿಮ್’ ಹೇಳಿಕೊಂಡರು. ‘ಟ್ರಂಪ್ ಸದ್ಯದಲ್ಲಿಯೇ ಅಮೇರಿಕವನ್ನು ಉತ್ತರ ಕೊರಿಯ 2.0 ಆಗಿ ಪರಿವರ್ತಿಸಲಿದ್ದಾರೆಂದೂ ಹಾಸ್ಯಭರಿತಾಗಿ ‘ಕಿಮ್’ ಹೇಳಿದರು.
ಈ ಟ್ರಂಪ್, ಕಿಮ್ ತದ್ರೂಪಿಗಳು ತಮ್ಮನ್ನೇ ತದೇಕಚಿತ್ತದಿಂದ ನೋಡಿದ ಜನರಿಗೆ ನೀಡಿದ ಒಂದೇ ಒಂದು ಸೂಚನೆಯೇನೆಂದರೆ ‘ನೋ ಸೆಲ್ಫೀಸ್ ಪ್ಲೀಸ್.’







