ಉಳ್ಳಾಲ ದರ್ಗಾದಲ್ಲಿ ಗಣರಾಜ್ಯೋತ್ಸವ ಆಚರಣೆ

ಉಳ್ಳಾಲ , ಜ.26 : ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ 68 ಗಣರಾಜ್ಯೋತ್ಸವ ಆಚರಣೆ ನಡೆಯಿತು.
ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಉಳ್ಳಾಲ್ ಅವರು ದ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಪ್ರವಾದಿ ಸ.ಅ ಮತ್ತು ಡಾ .ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೈಜವಾದಂತಹ ಸಂವಿಧಾನವನ್ನು ಒದಗಿಸಿಕೊಟ್ಟಿದ್ದಾರೆ. ಅದನ್ನು ಪಾಲಿಸುವವನೇ ನೈಜ ಮುಸ್ಲಿಂ. ನಾವು ಸಂವಿಧಾನವನ್ನು ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮಹಮ್ಮದ್ ತ್ವಾಹ, ಅರೆಬಿಕ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಸದಸ್ಯರಾದ ಫಾರೂಕ್ ಉಳ್ಳಾಲ್, ಬಾವ ಪಕೀರ್ ಸಾಬ್, ಅಬ್ದುಲ್ ರಹಮಾನ್ ಅದ್ದ, ಹಮ್ಮಬ್ಬ ಯು.ಕೆ, ಜಬ್ಬಾರ್ ಮೇಲಂಗಡಿ, ಅಶ್ರಫ್ ಮುಕ್ಕಚ್ಚೇರಿ, ಹಸನ್ ಕೈಕೋ, ಹಮೀದ್ ಕೋಡಿ, ಮೊಯ್ದಿನಬ್ಬ, ದರ್ಗಾ ಮೇನೇಜರ್ ಎ.ಎಂ.ಯೂಸೂಫ್, ಕಾರ್ಯನಿರ್ವಹಣಾಧಿಕಾರಿ ಸಯ್ಯಿದ್ ಶಿಹಾಬ್, ಶಾಲಾ ಕಾಲೇಜು ಆಡಳಿತಾಧಿಕಾರಿ ಹಾಜಿ ಅಬ್ದುಲ್ ಲತೀಫ್, ಪ್ರಾಂಶುಪಾಲ ಇಬ್ರಾಹಿಂ ಅಹ್ಸನಿ, ಹಿಪುಲ್ ಕುರಾನ್ ಕಾಲೇಜು ಪ್ರಾಂಶುಪಾಲ ಹಾಫಿಲ್ ಅಬ್ದುಲ್ ರಹ್ಮಾನ್ ಸಖಾಫಿ, ಹಝ್ರತ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಇಮ್ತಿಯಾಝ್ ಮೊದಲಾದವರು ಉಪಸ್ಥಿತರಿದ್ದರು.





