ಕಾರ್ಡ್‌ಬೋರ್ಡ್ ಪೆಟ್ಟಿಗೆಯಲ್ಲಿ ಮೂರು ದಿವಸದ ಅನಾಥ ಮಗು ಪತ್ತೆ

ಪನಮರಂ,ಜ. 26: ಮೂರು ದಿನದ ಗಂಡು ಮಗುವನ್ನು ಪನಮರಂ ಸೇತುವೆಯ ಹತ್ತಿರ ಇರುವ ನಿತ್ಯಸಹಾಯ ಮಾತಾ ದೇವಾಲಯದ ಮುಂಭಾಗದಲ್ಲಿ ಕಾರ್ಡ್ ಬೋರ್ಡ್‌ನಲ್ಲಿರಿಸಿ ಯಾರೋ ತೊರೆದು ಹೋಗಿರುವ ಘಟನೆ ನಡೆದಿದೆ. ಗಟ್ಟಿಹೊದಿಕೆಯಲ್ಲಿ ಮಗುವನ್ನು ಬೆಚ್ಚಗೆ ಇರಿಸಲಾಗಿತ್ತು. ದೇವಾಲಯದಲ್ಲಿ ಪ್ರಾರ್ಥನೆಗೆ ಬಂದವರು ಅಳುಕೇಳಿ ಕಾರ್ಡ್‌ಬೋರ್ಡ್ ತೆರೆದು ನೋಡಿದಾಗ ಅದರಲ್ಲಿ ಗಂಡು ಮಗು ಇತ್ತು. ನಂತರ ಅಲ್ಲಿಗೆ ಬಂದ ಪೊಲೀಸರು ಮಾನಂದವಾಡಿ ಜಿಲ್ಲಾಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ.
ಮಗುವು ಆರೋಗ್ಯವಾಗಿದೆ ಎಂದು ಮಾನಂದವಾಡಿ ಜಿಲ್ಲಾಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಂದ ಮಗುವನ್ನು ವೈತ್ತಿರಿ ಚೈಲ್ಡ್ ಲೈನ್ ಕಾರ್ಯಕರ್ತರಿಗೆ ಒಪ್ಪಿಸಲಾಗಿದೆ. ಪನಮರಂ ಪೊಲೀಸ್ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಗುವನ್ನು ಮಲಗಿಸಿದ ಕಾರ್ಡ್‌ಬೋರ್ಡ್‌ನ್ನು ಪನಮರಂನ ಒಂದು ಅಂಗಡಿಯಿಂದ ಎರಡು ದಿವಸಗಳ ಹಿಂದೆ ಖರೀದಿಸಲಾಗಿತ್ತು ಎಂದು ಪೊಲೀಸರಿಗೆ ವಿವರ ಲಭಿಸಿದೆ ಎಂದು ವರದಿಯಾಗಿದೆ.
Next Story





