ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯಾಧ್ಯಕ್ಷರ ಬಂಧನ : ಹೊಸಂಗಡಿಯಲ್ಲಿ ವ್ಯಾಪಾರಿಗಳಿಂದ ಪ್ರತಿಭಟನೆ

ಮಂಜೇಶ್ವರ , ಜ.26 : ಕಲ್ಲಿಕೋಟೆಯಲ್ಲಿ ಪ್ರತಿಭಟನೆಯೊಂದರ ವೇಳೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯಾಧ್ಯಕ್ಷ ಟಿ.ನಸರುದ್ದೀನ್ ರನ್ನು ಬಂಧಿಸಿದ ಪೋಲೀಸ್ ಕ್ರಮವನ್ನು ಖಂಡಿಸಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಮಂಜೇಶ್ವರ ಘಟಕದ ಅಧ್ಯಕ್ಷ ಎನ್.ಎಂ ಅಬ್ಬಾಸ್ ಉದ್ಗಾಟಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯಾಧ್ಯಕ್ಷರನ್ನು ಬಂಧಿಸುವ ಮೂಲಕ ಕೇರಳ ಪೋಲೀಸರು ರಾಜ್ಯದಲ್ಲಿ ಪೋಲೀಸ್ ರಾಜ್ ತೋರಿಸುತ್ತಿದ್ದಾರೆ. ಇದರ ವಿರುದ್ದ ವ್ಯಾಪಾರಿಗಳು ಸಕ್ರೀಯರಾಗಬೇಕೆಂದರು.
ಕಾರ್ಯದರ್ಶಿ ಬಿ.ಮೊಹಮ್ಮದ್ , ಏಕೋಪನ ಸಮಿತಿಯ ಬಶೀರ್ ಕನಿಲ , ಗಣೇಶ್ , ದಿನೇಶ್ , ಆರಿಫ್ ಮಚ್ಚಂಪಾಡಿ , ಎಂ.ಕೆ ಸಲಾಂ , ಅನೀಸ್ , ಮೊಯ್ದೀನಬ್ಬ , ಹಮೀದ್ ಹೊಸಂಗಡಿ , ಜಯಾನಂದ ಆಚಾರ್ಯ , ವಿವೇಕ್ ಮೊದಲಾದವರು ಉಪಸ್ಥಿತರಿದ್ದರು.
Next Story





