ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಇಜಾಝ್ ಅಹ್ಮದ್

ಬಂಟ್ವಾಳ, ಜ. 26: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಇಜಾಝ್ ಅಹ್ಮದ್ ಅಕ್ಕರಂಗಡಿ ಆಯ್ಕೆಯಾಗಿದ್ದಾರೆ.
ಬಂಟ್ವಾಳ ಘಟಕದ ಪ್ರಧಾನ ಕಚೇರಿಯಲ್ಲಿ ಬುಧವಾರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯಾ ಸಭೆ ನಡೆಯಿತು.
ಸಭೆಯಲ್ಲಿ ಮುಹಮ್ಮದ್ ಸಲೀಂ ಫರಂಗಿಪೇಟೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಖಾದರ್ ಪುತ್ತೂರು, ಇಕ್ಬಾಳ್ ನಂದರಬೆಟ್ಟು, ನಿಕಟಪೂರ್ವ ಅಧ್ಯಕ್ಷ ಝಕರಿಯಾ ಕಲ್ಲಡ್ಕ, ಜಿಲ್ಲಾ ಮುಖಂಡರಾದ ಹನೀಫ್ ಖಾನ್ ಕೋಡಾಜೆ ಉಪಸ್ಥಿತರಿದ್ದರು.
Next Story





