ಗುಡ್ಡೆಅಂಗಡಿ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ

ಬಂಟ್ವಾಳ, ಜ. 26: ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯಲ್ಲಿ ಗುರುವಾರ 68ನೆ ಗಣರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಮಸೀದಿಯ ಖತೀಬ್ ಸಿ.ಎಚ್.ಮುಹಮ್ಮದ್ ಲತೀಫಿ ಧ್ವಜಾರೋಹಣಗೈದು ಮಾತನಾಡಿದರು.
ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಫಕೀರ್ ಅಹ್ಮದ್, ಉಪಾಧ್ಯಕ್ಷ ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿ ಉಮರುಲ್ ಫಾರೂಕ್, ಕೋಶಾಧಿಕಾರಿ ಎಸ್.ಮುಹಮ್ಮದ್, ಸದಸ್ಯರಾದ ಮಜೀದ್ ಬೋಗೋಡಿ, ಸದರ್ ಹುಸೈನ್ ದಾರಿಮಿ, ಅಬೂಬಕ್ಕರ್ ಮುಸ್ಲಿಯಾರ್, ರಝಾಕ್ ಮುಸ್ಲಿಯಾರ್, ಶರೀಫ್ ಬೋಗೋಡಿ ಸಹಿತ ಮದರಸ ವಿದ್ಯಾರ್ಥಿಗಳು, ಸ್ಥಳೀಯರು ಉಪಸ್ಥಿತರಿದ್ದರು.
Next Story





