ಬಿಹಾರದಲ್ಲಿ ಬಿಜೆಪಿ ನಾಯಕ ಗುಂಡಿಗೆ ಬಲಿ

ಛಾಪ್ರಾ,ಜ.26: ಮಹಾರಾಜಗಂಜ್ ಸಂಸದ ಜನಾರ್ಧನ ಸಿಂಗ್ ಸಿಗ್ರಿವಾಲ್ ಅವರ ಸರನ್ ಜಿಲ್ಲೆಯ ಮಂಜ್ಹಿ ಬ್ಲಾಕ್ ಪ್ರತಿನಿಧಿ ಕೇಶವಾನಂದ ಗಿರಿ(60) ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಅವರ ಮನೆಯಿಂದ ಸುಮಾರು 500 ಮೀ.ದೂರದ ರಘುನಾಥಪುರ್ ಕಾ ಮಾಥಿಯಾ ಗ್ರಾಮದಲ್ಲಿ ಇಂದು ಬೆಳಿಗ್ಗೆ ಅವರ ಶವ ಪತ್ತೆಯಾಗಿದೆ.
ಬುಧವಾರ ರಾತ್ರಿ ಕೆಲವು ವ್ಯಕ್ತಿಗಳು ಬೈಕ್‌ಗಳಲ್ಲಿ ಗಿರಿಯವರ ಮನೆಗೆ ಬಂದಿದ್ದು, ಅವರೊಂದಿಗೆ ತೆರಳಿದ್ದರು. ಗಿರಿ ಯಾವುದೇ ಆತಂಕವಿಲ್ಲದೆ ಅವರೊಂದಿಗೆ ತೆರಳಿದ್ದರಿಂದ ಆ ವ್ಯಕ್ತಿಗಳು ಅವರಿಗೆ ಪರಿಚಿತರೇ ಆಗಿದ್ದಿರಬಹುದು ಎಂದು ಪೊಲೀಸರು ತಿಳಿಸಿದರು.
ಗಿರಿ 2015ರಲ್ಲಿ ಹಿಂದುಸ್ಥಾನ ಆವಾಮಿ ಮಂಚ್(ಜಾತ್ಯತೀತ)ನ ಅಭ್ಯರ್ಥಿಯಾಗಿ ಮಂಜ್ಹಿಯಿಂದ ವಿಧಾನಸಭೆಗೆ ವಿಫಲ ಸ್ಪರ್ಧೆ ನಡೆಸಿದ್ದರು.
Next Story





