ಶೀಘ್ರದಲ್ಲೇ 4 ಯಾತ್ರಿ ನಿವಾಸ ನಿರ್ಮಾಣ: ಮೊದಿನ್ ಬಾವಾ
ಅಡ್ಯಾರು-ಬೈದಾಪು ಕಾಂಕ್ರಟೀಕರಣ ರಸ್ತೆ ಉದ್ಘಾಟನೆ

ಮಂಗಳೂರು, ಜ.26: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಯಾತ್ರಿ ನಿವಾಸ ಮಂಜೂರಾಗಿದ್ದು, ಅಗತ್ಯ ಸ್ಥಳವನ್ನು ಗುರುತಿಸಿ ಶೀಘ್ರದಲ್ಲೇ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವಾ ತಿಳಿಸಿದ್ದಾರೆ.
ಅವರು ಗ್ರಾಮ ವಿಕಾಸ ಯೋಜನೆ ಅನುದಾನದಲ್ಲಿ ನಿರ್ಮಾಣವಾದ ಅಡ್ಯಾರು-ಬೈದಾಪು ಕಾಂಕ್ರಟೀಕರಣ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರದ ಗ್ರಾಮ ವಿಕಾಸ ಯೋಜನೆಯ ಅನುದಾನವನ್ನು ಈ ಭಾಗದ ಕಾಂಕ್ರಿಟೀಕರಣ ರಸ್ತೆ ಕಾಮಗಾರಿಗೆ ಬಳಸಿದ್ದೇನೆ. 11 ಲಕ್ಷ ರೂ.ಗಳ ಈ ಕಾಮಗಾರಿಯಲ್ಲಿ ಸುಮಾರು 4 ಲಕ್ಷ ರೂ. ಶಾಸಕ ನಿಧಿಯಿಂದ ಹಾಕಿರುವುದಾಗಿ ಅವರು ಹೇಳಿದರು.
ಸ್ಥಳೀಯವಾಗಿ ಅಡ್ಯಾರ್ ಪ್ರದೇಶವನ್ನು ಸಮಗ್ರ ಅಭಿವೃದ್ಧಿಗೆ ತಾನು ಪಣತೊಟ್ಟಿದ್ದು, ಈ ಭಾಗದಲ್ಲಿ ಸ್ಮಶಾನ, ಮುಸಲ್ಮಾನರ ದನ ಭೂಮಿ ಅಭಿವೃದ್ಧಿ ಸೇರಿದಂತೆ ಹಲವು ಕ್ರಮ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಸೀಮಾ ಮೆಲ್ವಿನ್ ಡಿಸೋಜ, ಮಾಜಿ ಸದಸ್ಯ ಮೆಲ್ವಿನ್ ಡಿಸೋಜ, ತಾಲೂಕು ಪಂಚಾಯತ್ ಅಧ್ಯಕ್ಷ ಮಲಾರ್ ಮೋನು, ಸದಸ್ಯ ಅಬ್ದುಲ್ ಸಮದ್, ಮುಖಂಡರಾದ ಸುರೇಂದ್ರ ಕಾಂಬ್ಳಿ, ಕರೀಂ, ಜಯಶೀಲಾ ಅಡ್ಯಂತಾಯ, ಆಶ್ರ್, ತ್ಯಾಂಪಣ್ಣ ಶೆಟ್ಟಿ, ರಝಾಕ್ ಕರ್ಮಾರ್, ರಮೇಶ್, ಸಮೀರ್, ಯಾಸೀನ್,ಅಬ್ಬಾಸ್, ರಮಾನಾಥ ರೈ ಅಭಿಮಾನ್ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಅನ್ವರ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.







