Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ವಾರ್ನರ್-ಹೆಡ್ ದ್ವಿತೀಯ ಸಾರ್ವಕಾಲಿಕ...

ವಾರ್ನರ್-ಹೆಡ್ ದ್ವಿತೀಯ ಸಾರ್ವಕಾಲಿಕ ಶ್ರೇಷ್ಠ ಜೊತೆಯಾಟ

ಪಾಕ್ ವಿರುದ್ಧದ ಏಕದಿನ ಸರಣಿ ಜಯಿಸಿದ ಆಸ್ಟ್ರೇಲಿಯ

ವಾರ್ತಾಭಾರತಿವಾರ್ತಾಭಾರತಿ26 Jan 2017 10:44 PM IST
share
ವಾರ್ನರ್-ಹೆಡ್ ದ್ವಿತೀಯ ಸಾರ್ವಕಾಲಿಕ ಶ್ರೇಷ್ಠ ಜೊತೆಯಾಟ

  ಅಡಿಲೇಡ್, ಜ.26: ಡೇವಿಡ್ ವಾರ್ನರ್(179) ಹಾಗೂ ಟ್ರೆವಿಸ್ ಹೆಡ್(128) ಮೊದಲ ವಿಕೆಟ್‌ಗೆ ದಾಖಲಿಸಿದ ದಾಖಲೆ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಪಂದ್ಯವನ್ನು 57 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ.

 ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡ ವಾರ್ನರ್(179 ರನ್, 128 ಎಸೆತ, 19 ಬೌಂಡರಿ, 5 ಸಿಕ್ಸರ್) ಹಾಗೂ ಹೆಡ್(128 ರನ್, 137 ಎಸೆತ, 9 ಬೌಂಡರಿ, 3 ಸಿಕ್ಸರ್) ಮೊದಲ ವಿಕೆಟ್‌ಗೆ ಸೇರಿಸಿದ 284 ರನ್ ಜೊತೆಯಾಟದ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 369 ರನ್ ಗಳಿಸಿತು.

ವಾರ್ನರ್-ಹೆಡ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ನಲ್ಲಿ 2ನೆ ಗರಿಷ್ಠ ಜೊತೆಯಾಟ ನಡೆಸಿದರು. 2006ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಸನತ್ ಜಯಸೂರ್ಯ ಹಾಗೂ ಉಪುಲ್ ತರಂಗ ಮೊದಲ ವಿಕೆಟ್‌ಗೆ ದಾಖಲಿಸಿದ 286 ರನ್ ವಿಶ್ವ ದಾಖಲೆಯ ಜೊತೆಯಾಟ ಮುರಿಯಲು ಕೇವಲ 2 ರನ್ ಕೊರತೆ ಎದುರಿಸಿದರು. ಈ ಜೋಡಿ ಆಸ್ಟ್ರೇಲಿಯದ ಪರ ಎಲ್ಲ ವಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಜೊತೆಯಾಟ ನಡೆಸಿದ ದಾಖಲೆ ನಿರ್ಮಿಸಿತು. ಆ್ಯರೊನ್ ಫಿಂಚ್ ಹಾಗೂ ಶಾನ್ ಮಾರ್ಷ್ ಸ್ಕಾಟ್ಲೆಂಡ್ ವಿರುದ್ಧ ಮೊದಲ ವಿಕೆಟ್‌ಗೆ ದಾಖಲಿಸಿದ್ದ 246 ರನ್ ದಾಖಲೆಯನ್ನು ಮುರಿದರು.

ಗೆಲ್ಲಲು ಕಠಿಣ ಗುರಿ ಪಡೆದ ಪಾಕಿಸ್ತಾನ ತಂಡ ಬಾಬರ್ ಆಝಂ(100ರನ್, 109 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಶಾರ್ಜೀಲ್ ಖಾನ್(79) ಹೋರಾಟಕಾರಿ ಬ್ಯಾಟಿಂಗ್‌ನ ಹೊರತಾಗಿಯೂ 49.1 ಓವರ್‌ಗಳಲ್ಲಿ 312 ರನ್‌ಗೆ ಆಲೌಟಾಯಿತು. ಪಾಕ್ ಸರಣಿಯಲ್ಲಿ ಮೊದಲ ಬಾರಿ 300ಕ್ಕೂ ಅಧಿಕ ರನ್ ದಾಖಲಿಸಿ ಗಮನ ಸೆಳೆಯಿತು.

57 ರನ್‌ಗಳಿಂದ ಶರಣಾದ ಪಾಕ್ ಬರಿಗೈಯಲ್ಲಿ ಸ್ವದೇಶಕ್ಕೆ ವಾಪಸಾಗುತ್ತಿದೆ. ಪಾಕ್ ತಂಡ ಇದಕ್ಕೂ ಮೊದಲು ನಡೆದಿದ್ದ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಸೋತಿತ್ತು.

ಜ.26 ರಂದು ಆಸ್ಟ್ರೇಲಿಯ ದಿನವನ್ನು ಆಚರಿಸುತ್ತಿರುವ ಆಸ್ಟ್ರೇಲಿಯದ ಜನತೆಗೆ ವಾರ್ನರ್-ಹೆಡ್ ವಿಶೇಷ ಕೊಡುಗೆ ನೀಡಿದರು. ಆದರೆ, ವಾರ್ನರ್ 179 ರನ್‌ಗೆ ಔಟಾಗಿ ದ್ವಿಶತಕದಿಂದ ವಂಚಿತರಾಗಿದ್ದಕ್ಕೆ ಅಡಿಲೇಡ್ ಓವಲ್‌ನ ಪ್ರೇಕ್ಷಕರು ನಿರಾಸೆಗೊಂಡರು. 13ನೆ ಏಕದಿನ ಶತಕವನ್ನು ದಾಖಲಿಸಿದ ವಾರ್ನರ್ ಹಾಗೂ ಚೊಚ್ಚಲ ಶತಕ ಬಾರಿಸಿದ ಹೆಡ್‌ಗೆ ಪ್ರೇಕ್ಷಕರಿಂದ ಶ್ಲಾಘನೆ ವ್ಯಕ್ತವಾಯಿತು.

 ಸರಣಿಯಲ್ಲಿ 2ನೆ ಬಾರಿ ವಾರ್ನರ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಹೆಡ್ ಎರಡನೆ ಸಾರ್ವಕಾಲಿಕ ಶ್ರೇಷ್ಠ ಜೊತೆಯಾಟ ನಡೆಸಿದರು. 179 ರನ್‌ಗೆ ಔಟಾದ ವಾರ್ನರ್ ಕೇವಲ 6 ರನ್‌ನಿಂದ ಆಸೀಸ್‌ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸುವ ಅವಕಾಶ ಕಳೆದುಕೊಂಡರು. ಶೇನ್ ವ್ಯಾಟ್ಸನ್ 2011ರಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 185 ರನ್ ಗಳಿಸಿದ್ದು ಆಸೀಸ್ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್.

ಪಾಕ್‌ಗೆ 41ನೆ ಓವರ್ ತನಕ ವಿಕೆಟ್‌ಪಡೆಯಲು ಸಾಧ್ಯವಾಗಲಿಲ್ಲ. 41.3ನೆ ಓವರ್‌ನಲ್ಲಿ ಜುನೈದ್ ಖಾನ್ ಈ ಜೋಡಿಯನ್ನು ಕೊನೆಗೂ ಬೇರ್ಪಡಿಸಿದರು.

ವಾರ್ನರ್ ಪಂದ್ಯದಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲಿ ಆಮಿರ್ ಎಸೆತದಲ್ಲಿ ಔಟಾಗುವ ಅವಕಾಶದಿಂದ ಪಾರಾದರು. 34 ಎಸೆತಗಳಲ್ಲಿ ವೇಗವಾಗಿ ಅರ್ಧಶತಕ ಪೂರೈಸಿದ ಅವರು 130 ರನ್ ಗಳಿಸಿದ್ದಾಗ ಮತ್ತೊಮ್ಮೆ ಜೀವದಾನ ಪಡೆದರು. ಆಸೀಸ್ ಅಂತಿಮ 10 ಓವರ್‌ಗಳಲ್ಲಿ ಬರೋಬ್ಬರಿ 100 ರನ್ ಕಲೆ ಹಾಕಿತು.

ಅಂಕಿ-ಅಂಶ

6: ವಾರ್ನರ್ ಈ ಋತುವಿನಲ್ಲಿ 6ನೆ ಶತಕ ಬಾರಿಸಿದರು. ಲಂಕಾದ ಕುಮಾರ ಸಂಗಕ್ಕರ ದಾಖಲೆ ಸರಿಗಟ್ಟಿದರು. ಸಂಗಕ್ಕರ 2014-15ರ ಋತುವಿನಲ್ಲಿ 23 ಇನಿಂಗ್ಸ್‌ಗಳಲ್ಲಿ 6 ಶತಕ ಬಾರಿಸಿದ್ದರು. ವಾರ್ನರ್ ಸತತ 11 ಇನಿಂಗ್ಸ್‌ಗಳಲ್ಲಿ 6ನೆ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್.

 91: ವಾರ್ನರ್ 13 ಶತಕ ಬಾರಿಸಲು 91 ಇನಿಂಗ್ಸ್ ತೆಗೆದುಕೊಂಡರು. ಹಾಶಿಮ್ ಅಮ್ಲ(83 ಇನಿಂಗ್ಸ್) ಹಾಗೂ ವಿರಾಟ್ ಕೊಹ್ಲಿ(86 ಇನಿಂಗ್ಸ್) ಬಳಿಕ 3ನೆ ವೇಗವಾಗಿ ಈ ಸಾಧನೆ ಮಾಡಿದರು.

179: ವಾರ್ನರ್ ಆಸ್ಟ್ರೇಲಿಯದ ಪರ ಏಕದಿನದಲ್ಲಿ 3ನೆ ಗರಿಷ್ಠ ಸ್ಕೋರ್ ದಾಖಲಿಸಿದರು.

100: ಪಾಕ್‌ನ ಹಸನ್ ಅಲಿ 9 ಓವರ್‌ಗಳಲ್ಲಿ 100 ರನ್ ನೀಡಿದ್ದಾರೆ. ಏಕದಿನದಲ್ಲಿ ಪಾಕ್ ಪರ 2ನೆ ದುಬಾರಿ ಬೌಲರ್ ಆಗಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 369/7

(ವಾರ್ನರ್ 179, ಹೆಡ್ 128, ಜುನೈದ್ ಖಾನ್ 2-61, ಹಸನ್ ಅಲಿ 2-100)

ಪಾಕಿಸ್ತಾನ: 49.1 ಓವರ್‌ಗಳಲ್ಲಿ 312 ರನ್‌ಗೆ ಆಲೌಟ್

(ಬಾಬರ್ ಆಝಂ 100, ಶಾರ್ಜೀಲ್ ಖಾನ್ 79, ಅಕ್ಮಲ್ 46, ಸ್ಟಾರ್ಕ್ 4-42, ಕುಮಿನ್ಸ್ 2-60)

ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್

ಸರಣಿಶ್ರೇಷ್ಠ: ಡೇವಿಡ್ ವಾರ್ನರ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X