ಟ್ರಂಪ್ ಜೊತೆ ಭೇಟಿ ಕೈಬಿಟ್ಟ ಮೆಕ್ಸಿಕೊ ಅಧ್ಯಕ್ಷ

ವಾಷಿಂಗಟನ್,ಜ.26: ಮುಂದಿನ ಮಂಗಳವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ನಿಗದಿಯಾಗಿದ್ದ ಭೇಟಿಯನ್ನು ಮೆಕ್ಸಿಕೊದ ಅಧ್ಯಕ್ಷ ಎನ್ರಿಕ್ ಪೆನಾ ನೀಟೊ ಅವರು ಇಂದು ರದ್ದುಗೊಳಿಸಿದ್ದಾರೆ. ಉಭಯ ರಾಷ್ಟ್ರಗಳ ಗಡಿಯಲ್ಲಿ ಗೋಡೆಯೊಂದನ್ನು ನಿರ್ಮಿಸುವ ಟ್ರಂಪ್ ಅವರ ಯೋಜನೆಯ ಕುರಿತು ಉದ್ವಿಗ್ನತೆ ಮರುಕಳಿಸಿರುವುದು ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ.
‘ಮಂಗಳವಾರ ಟ್ರಂಪ್ ಜೊತೆ ನಿಗದಿಯಾಗಿದ್ದ ಸಭೆಗೆ ನಾನು ಬರುತ್ತಿಲ್ಲ ಎಂದು ನಾವಿಂದು ಬೆಳಿಗ್ಗೆ ಶ್ವೇತಭವನಕ್ಕೆ ತಿಳಿಸಿದ್ದೇವೆ ’ ಎಂದು ನೀಟೊ ಟ್ವೀಟಿಸಿದ್ದಾರೆ.
ಇದಕ್ಕೂ ಮುನ್ನ ‘ಗೋಡೆ ನಿರ್ಮಾಣಕ್ಕೆ ಮೆಕ್ಸಿಕೊ ಹಣ ನೀಡುವುದಿಲ್ಲ ಎಂಬ ಪಟ್ಟನ್ನು ನೀಟೊ ಮುಂದುವರಿಸುವುದಾದರೆ ಅವರು ನನ್ನೊಂದಿಗೆ ಭೇಟಿಯನ್ನು ಕೈ ಬಿಡುವುದು ಒಳ್ಳೆಯದು ’ಎಂದು ಟ್ರಂಪ್ ಟ್ವೀಟಿಸಿದ್ದರು.
ಗೋಡೆ ನಿರ್ಮಾಣಕ್ಕೆ ಮೆಕ್ಸಿಕೊ ಹಣ ನೀಡುವುದಿಲ್ಲ ಎಂದು ನೀಟೊ ಬುಧವಾರ ಸಂಜೆ ಸ್ಪಷ್ಟವಾಗಿ ಹೇಳಿದ್ದರು.
Next Story





