Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಂತಿಮ ಯುದ್ಧದಲ್ಲಿ ಕರ್ಣಕುಂಡಲವನ್ನು...

ಅಂತಿಮ ಯುದ್ಧದಲ್ಲಿ ಕರ್ಣಕುಂಡಲವನ್ನು ಕಿತ್ತುಕೊಂಡಂತೆ

ಶ್ರೀಧರ ಪ್ರಭುಶ್ರೀಧರ ಪ್ರಭು27 Jan 2017 12:32 AM IST
share
ಅಂತಿಮ ಯುದ್ಧದಲ್ಲಿ ಕರ್ಣಕುಂಡಲವನ್ನು ಕಿತ್ತುಕೊಂಡಂತೆ

ಕಳೆದ ಲೋಕಸಭಾ ಚುನಾವಣೆಗಳಲ್ಲಿ ಮೋದಿಯವರನ್ನು ಅಧಿಕಾರಕ್ಕೆ ತರಲು ಮತೀಯವಾದ, ಹಣಬಲಗಳ ಜೊತೆಗೆ ಒಂದು ಬಲವಾದ ಕಾರಣವಿದ್ದರೆ ಮಣಿಶಂಕರ್ ಅಯ್ಯರ್ ಅವರ ಚಾಯ್ ವಾಲಾ ಹೇಳಿಕೆ. ಇದನ್ನೇ ಮುಂದಿಟ್ಟುಕೊಂಡು ಭಾಜಪದವರು ದೇಶದ ತುಂಬಾ ಪ್ರಚಾರ ಮಾಡಿಬಿಟ್ಟರು. ಮಣಿಶಂಕರ್ ಅಯ್ಯರ್ ಈ ಹೇಳಿಕೆಯನ್ನು ಮೋದಿಯವರಿಗೆ ಸಹಾಯವಾಗಲಿ ಎಂದು ಕೊಟ್ಟರೋ, ಇಲ್ಲವೇ ಅಚಾತುರ್ಯದಿಂದ ಹೇಳಿದರೋ ಅವರಿಗೇ ಗೊತ್ತು.

ಹಾಗೆಯೇ ಸೋನಿಯಾ ಗಾಂಧಿಯವರು ಉತ್ತರ ಪ್ರದೇಶದ ಕುಶಿನಗರದಲ್ಲಿ ಮೋದಿಯವರು ‘ನೀಚ ರಾಜಕಾರಣ’ ಮಾಡುತ್ತಿದ್ದಾರೆ ಎಂದಿದ್ದರು. ಇದನ್ನು ಮೋದಿಯವರು ತಮ್ಮ ಒಂದು ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಸ್ತಾಪಿಸಿ ತಾವು ಹಿಂದುಳಿದ ಜಾತಿಗೆ ಸೇರಿದ ಕಾರಣಕ್ಕಾಗಿ ಸೋನಿಯಾ ಗಾಂಧಿಯವರು ತಮ್ಮನ್ನು ‘ನೀಚ’ (ಹಿಂದಿಯಲ್ಲಿ ’ನೀಚ’ ಎಂದರೆ ‘ಕೆಳಗೆ’ ಎಂದರ್ಥ) ಎಂದರೆಂದು ಪ್ರಚಾರ ಮಾಡಿಬಿಟ್ಟರು. ಇದು ಸಾಕಷ್ಟು ಪರಿಣಾಮವನ್ನೂ ಬೀರಿತು. ಮೋದಿಯವರ ಜಾತಿಯ ಬಗ್ಗೆ ಪ್ರಸ್ತಾವನೆಯನ್ನೇ ಮಾಡದ ಸೋನಿಯಾ ಮೋದಿಯವರ ಈ ಹೊಸ ವ್ಯಾಖ್ಯಾನ ನೋಡಿ ಕಕ್ಕಾಬಿಕ್ಕಿಯಾಗಿಬಿಟ್ಟರು. ಒಟ್ಟಿನಲ್ಲಿ ವಿರೋಧಿಗಳ ಹೇಳಿಕೆಗಳ ಮುಖಾಂತರವೇ ವಿರೋಧಿಗಳನ್ನು ಮಣಿಸುವುದರಲ್ಲಿ ಮೋದಿ ನಿಷ್ಣಾತರು. ಎಷ್ಟಾದರೂ ಸ್ವಯಂ ಸೇವಕರಲ್ಲವೇ!

ಸಾಕಷ್ಟು ಕಡೆ ಈ ಮಾತು ಪ್ರಚಲಿತವಿರುವುದನ್ನು ನಾನು ಕೇಳಿದ್ದೇನೆ: ಗುರು ಎಲ್ಲ ವಿದ್ಯೆ ಕಲಿಸಿಕೊಟ್ಟ ಮೇಲೂ ಒಂದಷ್ಟು ವಿಶೇಷ ವಿದ್ಯೆಗಳನ್ನು ತನ್ನ ಬಳಿಯೇ ಬಚ್ಚಿಟ್ಟುಕೊಂಡಿರುತ್ತಾನಂತೆ. ಸ್ವಯಂ ಸೇವಕ ಸಂಘದವರ ವಿಚಾರವಾಗಿಯೇ ಇದನ್ನು ಹೇಳಿರಬೇಕು ಎನಿಸುತ್ತದೆ. ಎಷ್ಟೇ ಪಟ್ಟುಗಳನ್ನು ಹೇಳಿಕೊಟ್ಟರೂ ಸಂಘದವರು ಮೋದಿಯವರಿಗೆ ಅಂತಿಮ ಪಟ್ಟನ್ನು ಮಾತ್ರ ಹೇಳಿಕೊಡಲಿಲ್ಲ. ಮೋದಿಯವರು ಆರಿಸಿ ಬಂದ ನಂತರದಲ್ಲಿ ಪ್ರತೀ ಮಹತ್ವದ ಚುನಾವಣೆಗಳ ಸಂದರ್ಭದಲ್ಲೂ ಸಂಘದವರು ಮೀಸಲಾತಿ ಕಿತ್ತುಹಾಕುವ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ದಿಲ್ಲಿ ಚುನಾವಣೆಯಲ್ಲಿ ಮೀಸಲಾತಿಯನ್ನು ಪ್ರಸ್ತಾಪಿಸದಿದ್ದರೂ ಸಂಘದವರು ಪರೋಕ್ಷವಾಗಿ ಆಮ್ ಆದ್ಮಿ ಪಾರ್ಟಿಗೆ ಬೆಂಬಲವಾಗಿ ನಿಂತಿದ್ದರು.

ಹೀಗೆ ಮೋದಿಯವರಿಗೆ ಪ್ರತಿಬಾರಿಯೂ ತೊಡರುಗಾಲು ಹಾಕುತ್ತಿರುವ ಸಂಘದವರಿಗೆ ಮೋದಿಯವರನ್ನು ಒಂದು ಹಂತಕ್ಕೂ ಮೀರಿ ಬೆಳೆಸುವುದು ನಿಜಕ್ಕೂ ಮನಸ್ಸಿಲ್ಲ. ಅದಕ್ಕೆ ಕಾರಣ ಸ್ಪಷ್ಟ - ಮೋದಿಯವರ ಜಾತಿ. ಮೋದಿಯವರನ್ನು ಕೇವಲ ಸಂಘಟನಾ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದ ಸಂಘದವರಿಗೆ ಅವರು ಈ ಹಂತವನ್ನು ತಲುಪುವುದು ನಿಜಕ್ಕೂ ಇಷ್ಟವಿರಲಿಲ್ಲ. ಗುಜರಾತ್ ಗಲಭೆ, ಅಂಬಾನಿ-ಅದಾನಿ ಬೆಂಬಲ ಹೀಗೆ ನಾನಾ ಕಾರಣಗಳಿಂದ ನೋಡ ನೋಡುತ್ತಲೇ ಮೋದಿಯವರು ಸಂಘದವರ ನಿರೀಕ್ಷೆಗೂ ಮೀರಿ ಬೆಳೆದುನಿಂತರು. ಸಂಘ, ಪಕ್ಷ, ಚಿನ್ಹೆ, ಸಂಘಟನೆ ಎಲ್ಲಕ್ಕೂ ಮೀರಿ ಬೆಳೆದ ಮೋದಿಯವರನ್ನು ಹತ್ತಿಕ್ಕುವ ಅನಿವಾರ್ಯತೆ ಸಂಘಕ್ಕಿದೆ. ಬಲಿಯನ್ನು ಬಲಿತೆಗೆದುಕೊಳ್ಳಲು ಆಕಾಶಗಾತ್ರಕ್ಕೆ ಬೆಳೆಯುವ ಸಾಮರ್ಥ್ಯ ಸಂಘಕ್ಕಿದೆ. ಸಂಘ ಮನಸ್ಸು ಮಾಡಿದರೆ ನಾಳೆಯೇ ಮೋದಿ ಜೀರೋ ಶೂನ್ಯಕ್ಕಿಳಿಯುತ್ತಾರೆ. ಆದರೆ, ಸಂಘಕ್ಕೆ ಇದು ಬೇಕಾಗಿಲ್ಲ. ಸಾವಧಾನವಾಗಿ, ಸಹಜವೇನೋ ಎಂಬಂತೆ ಮೋದಿಯವರು ಜನಮಾನಸದಿಂದ ಮರೆಯಾಗಬೇಕು. ಹಿಂದುಳಿದ ಸಮುದಾಯಗಳೇ ಮೋದಿಯವರನ್ನು ಹಿಂದಕ್ಕಟ್ಟಬೇಕು.

‘ಮೀಸಲಾತಿ ತೆಗೆಯುತ್ತೇವೆ’ ಎಂದರೆ ಉತ್ತರ ಪ್ರದೇಶದಲ್ಲಿ ಹೆಚ್ಚು ಕೆರಳುವುದು ಹಿಂದುಳಿದವರು ಮತ್ತು ಭಾಜಪದ ಜೊತೆಗಿರುವ ಒಂದಷ್ಟು ಜನ ಪರಿಶಿಷ್ಟರು. ಇದೇ ಮತಗಳು ನಿರ್ಣಾಯಕವಾಗಿ ಬಿಟ್ಟರೆ ಭಾಜಪ ನೆಲಕಚ್ಚುವುದು ಖಾತ್ರಿ. ಇದೇ ಸಂಘಕ್ಕೂ ಬೇಕಿರುವುದು. ಉತ್ತರ ಪ್ರದೇಶದಲ್ಲಿ ಸೋತರೆ ಮೋದಿಯವರನ್ನು ಮಣಿಸಲು ಸುಲಭ ಸಾಧ್ಯ. ಹಿಂದೆ ಒಂದು ಸಂದರ್ಭದಲ್ಲಿ ವಾಜಪೇಯಿ ಮೇಲೆ ಮುನಿಸಿಕೊಂಡು ಸಂಘದವರು ಇಂದಿರಾ ಗಾಂಧಿಯವರನ್ನು ಬೆಂಬಲಿಸಿ ಸಾಕಷ್ಟು ಬಹುಮತದಿಂದ ಗೆಲ್ಲಿಸಿದ್ದರು. ಸಂಘಕ್ಕೆ ಈಗಲೂ ಆ ಶಕ್ತಿಯಿದೆ. ಮೋದಿಯವರ ಕರ್ಣಕುಂಡಲವನ್ನು ಕೀಳಲು ಸನ್ನದ್ಧವಾಗಿರುವ ಶಕ್ತಿಗಳು ಸಾಕಷ್ಟು ಸಕ್ಷಮವಾಗಿವೆ.

ಸಂಘದವರು ಇದನ್ನು ಒಂದೇ ಬಾರಿ ಹೇಳಿಲ್ಲ ಮತ್ತು ಸಂಘದ ಸಾಮಾನ್ಯ ಕಾರ್ಯಕರ್ತರೂ ಹೇಳಿಲ್ಲ. ಮೀಸಲಾತಿ ತೆಗೆಯಬೇಕು ಎಂದು ಜಯಪುರದಲ್ಲಿ ಹೇಳಿಕೆ ಕೊಟ್ಟ ಮನಮೋಹನ ವೈದ್ಯರು ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರು. ತದನಂತರದಲ್ಲಿ ಸಂಘದ ಹಿರಿಯ ನಾಯಕರೂ, ಮನಮೋಹನ ವೈದ್ಯರ ತಂದೆಯವರಾದ ಮಾ.ಗೋ. ವೈದ್ಯರೂ ನಾಗಪುರದಲ್ಲಿ ತಮ್ಮ ಮಗನ ಹೇಳಿಕೆಯನ್ನು ಸಮರ್ಥಿಸಿ ಹೇಳಿಕೆ ಕೊಟ್ಟರು. ನೀವೇ ಯೋಚನೆ ಮಾಡಿ, ಸಂಘದ ಇಬ್ಬರು ಪ್ರಮುಖ ನಾಯಕರು ಇಷ್ಟು ಸ್ಪಷ್ಟವಾಗಿ ಹೇಳಿರಬೇಕಾದರೆ ಇದು ಅಚಾತುರ್ಯದ ಹೇಳಿಕೆಯಾಗಿರಲು ಸಾಧ್ಯವೇ?

ಅಂತೂ ಭವಿಷ್ಯದಲ್ಲಿ, ‘ಮೋದಿ ಬ್ರಿಗೇಡ್’ನವರಿಗೆ ಈಗ ರಾಯಣ್ಣ ಬ್ರಿಗೇಡ್‌ನವರಿಗೆ ಬಂದ ಗತಿಯೇ ಬಂದರೆ ಆಶ್ಚರ್ಯವಿಲ್ಲ.

share
ಶ್ರೀಧರ ಪ್ರಭು
ಶ್ರೀಧರ ಪ್ರಭು
Next Story
X