ಸೇನೆಯಲ್ಲಿ ಬಂಡಾಯಕ್ಕೆ ಆರೆಸ್ಸೆಸ್ ಪ್ರಯತ್ನಿಸಿತ್ತು !
ಸಿಐಎ ದಾಖಲೆಗಳಿಂದ ಬಹಿರಂಗ
.jpg)
ಹೊಸದಿಲ್ಲಿ, ಜ. 27 : ಅಮೆರಿಕದ ಕೇಂದ್ರ ಗುಪ್ತಚರ ಇಲಾಖೆ (ಸಿಐಎ) ಇತ್ತೀಚೆಗೆ ಬಹಿರಂಗಪಡಿಸಿದಸುಮಾರು 1.3ಕೋಟಿ ದಾಖಲೆಗಳಲ್ಲಿ ಒಂದು ಕುತೂಹಲಕಾರಿ ಮಾಹಿತಿಯಿದೆ. ಸೇನೆಯಲ್ಲಿ ಆರೆಸ್ಸೆಸ್ ಬಂಡಾಯಕ್ಕೆ ಯತ್ನಿಸಿತ್ತು ಎಂದು ಅದರಲ್ಲಿ ಹೇಳಲಾಗಿದೆ.
ದಾಖಲೆಗಳ ಪ್ರಕಾರ 1950ರಲ್ಲಿ ಆಗ ಜನರಲ್ ಆಗಿದ್ದಭಾರತೀಯ ಸೇನೆಯ ಪ್ರಪ್ರಥಮ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಎಂ. ಕಾರ್ಯಪ್ಪ ಅವರ ಹತ್ಯಾ ಯತ್ನವೊಂದು ನಡೆದಿತ್ತು.
ಜೂನ್ 12, 1950ರಲ್ಲಿ ದಾಖಲಿಸಲಾದ ‘ರಿಫ್ಟ್ ಇನ್ ಆಫೀಸರ್ಸ್ ಕಾರ್ಪ್ಸ್ ಆಫ್ ದಿ ಇಂಡಿಯನ್ ಆರ್ಮಿ" ಎಂಬ ಶೀರ್ಷಿಕೆಯ ವರದಿಯಲ್ಲಿ ‘‘ಕಾರ್ಯಪ್ಪ ಅವರು ಪೂರ್ವ ಪಂಜಾಬ್ ಗೆ ಭೇಟಿ ನೀಡಿದ್ದಾಗ ಅವರ ಹತ್ಯಾ ಯತ್ನ ನಡೆದಿತ್ತು’’ ಎಂದು ತಿಳಿಸಿದೆಯಲ್ಲದೆ ಈಸಂಬಂಧಆರು ಮಂದಿಗೆಮರಣದಂಡನೆ ಕೂಡ ವಿಧಿಸಲಾಗಿತ್ತು ಎಂದು ಹೇಳಿದೆ. ಈ ಸಂಚಿನ ಹಿಂದೆ ಹಲವಾರು ಹಿರಿಯ ಸೇನಾಧಿಕಾರಿಗಳ ಶಾಮೀಲಾತಿಯೂ ಇದ್ದಿರಬಹುದು ಎಂದು ಅದು ತಿಳಿಸಿದೆ.
ಇಲ್ಲಿ ಇನ್ನೊಂದು ಕುತೂಹಲಕಾರಿ ಮಾಹಿತಿಯೇನೆಂದರೆ ‘‘ಜನರಲ್ ಕಾರ್ಯಪ್ಪ ಅವರು ದಕ್ಷಿಣ ಭಾರತೀಯರಾಗಿದ್ದುದರಿಂದ ಅವರನ್ನು ಕಂಡರೆ ಭಾರತೀಯ ಸೇನೆಯ ಸಿಕ್ಖ್ ಅಧಿಕಾರಿಗಳಿಗೆ ಆಗುತ್ತಿರಲಿಲ್ಲ. ಈ ಉತ್ತರ-ದಕ್ಷಿಣ ಸೇನಾಧಿಕಾರಿಗಳ ನಡುವಣ ಇದ್ದ ಒಡಕಿನ ಲಾಭ ಪಡೆದ ಆರೆಸ್ಸೆಸ್ ಸಿಖ್ ಅಧಿಕಾರಿಗಳನ್ನು ಅವರ ವಿರುದ್ಧ ಎತ್ತಿ ಕಟ್ಟಲು ಯತ್ನಿಸುತ್ತಿತ್ತು. ಮಾಹಿತಿದಾರ ಅವರನ್ನು ನಂಬಲನರ್ಹರು ಹಾಗೂ ಒಡಕನ್ನು ಸೃಷ್ಟಿಸಲೆತ್ನಿಸುತ್ತಿರುವವರು ಎಂದು ಹೇಳಿದ್ದಾರೆ,’’ ಎಂದು ದಾಖಲೆಯಲ್ಲಿ ತಿಳಿಸಲಾಗಿತ್ತಲ್ಲದೆ, ‘‘ತಿರುವಾಂಕೂರು (ಈಗಿನ ಕೇರಳ), ಮದ್ರಾಸ್ ಮತ್ತು ಮಹಾರಾಷ್ಟ್ರದ ಅಧಿಕಾರಿಗಳು ಮಾತ್ರ ಜನರಲ್ ಕಾರ್ಯಪ್ಪ ಅವರಿಗೆ ಯಾವತ್ತೂ ನಿಷ್ಠರಾಗಿದ್ದರು,’’ ಎಂದು ಹೇಳಿದೆ.







