ತಿರುವನಂತಪುರ ವಿಮಾನನಿಲ್ದಾಣದ ಕಟ್ಟಡದಿಂದ ಹಾರಿ ರಷ್ಯನ್ ಆತ್ಮಹತ್ಯೆ

ತಿರುವನಂತಪುರ,ಜ.27: ರಷ್ಯನ್ ಪ್ರಜೆಯೋರ್ವ ಇಲ್ಲಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಹು ಅಂತಸ್ತುಗಳ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ.
ಮೃತ ಡ್ಯಾನಿ(30) ಪ್ರವಾಸಿಯಾಗಿ ಭಾರತಕ್ಕೆ ಬಂದಿದ್ದು, ಇಲ್ಲಿಂದ ಮುಂಬೈಗೆ ತೆರಳಲಿದ್ದ. ಗುರುವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದಲ್ಲಿಯ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸರು ಇಂದಿಲ್ಲಿ ತಿಳಿಸಿದರು.
ತೀವ್ರವಾಗಿ ಗಾಯಗೊಂಡಿದ್ದ ಡ್ಯಾನಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆತ ಬದುಕುಳಿಯಲಿಲ್ಲ. ಶವವನ್ನು ಇಲ್ಲಿಯ ಸರಕಾರಿ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿರಿಸಲಾಗಿದ್ದು, ಪೊಲೀಸರು ರಷ್ಯನ್ ದೂತಾವಾಸಕ್ಕೆ ಮಾಹಿತಿ ನೀಡಿದ್ದಾರೆ.
Next Story





