ಮೂಡುಗೋಪಾಡಿ: ಜ.29ರಂದು ಸಲಫಿ ಸಮಾವೇಶ
ಕುಂದಾಪುರ, ಜ.27: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಹಮ್ಮಿಕೊಂಡಿರುವ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್ಕೆಎಸ್ಸೆಮ್ ಕುಂದಾಪುರ ಘಟಕದ ವತಿಯಿಂದ ಜ.29ರಂದು ಸಂಜೆ ಗಂಟೆ 4:30ಕ್ಕೆ ಮೂಡುಗೋಪಾಡಿ ಸಲಫಿ ಮಸೀದಿಯ ಬಳಿ ಸಲಫಿ ಸಮಾವೇಶ ಆಯೋಜಿಸಲಾಗಿದೆ.
ಸಮಾವೇಶದಲ್ಲಿ ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲ ಮುಸ್ಲಿಯಾರ್, ಮೌಲವಿ ಮುಸ್ತಫಾ ದಾರಿಮಿ ಮತ್ತು ಮೌಲವಿ ಅಲಿ ಉಮರ್ ಉಪನ್ಯಾಸ ನೀಡಲಿದ್ದಾರೆಂದು ಘಟಕದ ಅಧ್ಯಕ್ಷ ಡಿ.ಕೆ.ಇಬ್ರಾಹೀಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





