ಜಿಲ್ಲಾಧಿಕಾರಿ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ

ಶಿವಮೊಗ್ಗ , ಜ.27 : 16 ವರ್ಷದ ಬಾಲಕಿಯೊಬ್ಬಳು ಜಿಲ್ಲಾಧಿಕಾರಿ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ .
ಬಾಲಕಿಯು ಶಿಕಾರಿಪುರ ತಾಲೂಕು ಅಂಜಾನಪುರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ .
ಜಮೀನು ವಿವಾದ ಸಂಬಂಧ ನ್ಯಾಯ ಕೇಳಲು ಕುಟುಂಬದ ಜೊತೆ ಬಂದಿದ್ದ ಬಾಲಕಿ ಕಂದಾಯ ಸಚಿವ ಕಾಗೋಡು ಸಮ್ಮುಖದಲ್ಲೇ ವಿಷ ಸೇವಿಸದ್ದಾಳೆ ಎಂದು ತಿಳಿದು ಬಂದಿದೆ.
ಬಾಲಕಿಯನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





