ಮೆಲ್ಕಾರ್ : ಆಕ್ಟಿವಾ ಢಿಕ್ಕಿ , ಪಾದಚಾರಿ ಸಾವು

ಬಿ.ಸಿ.ರೋಡು , ಜ.27 : ರಸ್ತೆ ದಾಟುತ್ತಿದ್ದ ಪಾದಚಾರಿಗೆ ಆಕ್ಟಿವಾ ಢಿಕ್ಕಿ ಹೊಡೆದು ಸಾವು ಸಂಭವಿಸಿದ ಘಟನೆ ಮೆಲ್ಕಾರ್ ಪಟ್ಟಣದಲ್ಲಿ ನಡೆದಿದೆ.
ಮೃತಪಟ್ಟವರು ಮುಡಿಪು ಇನ್ಫೋಸಿಸ್ ನಲ್ಲಿ ಕಾವಲುಗಾರ ವಿಭಾಗದಲ್ಲಿ ಉದ್ಯೋಗಿ ಮೋಹನ್ ರೈ(50) ಎಂದು ತಿಳಿದು ಬಂದಿದೆ
ಇವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆಯವರಾಗಿದ್ದು , ಪ್ರಸ್ತುತ ಇರಾ ಗ್ರಾಮದ ಕುರಿಯಾಡಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
Next Story





