ಆಸ್ಟ್ರೇಲಿಯನ್ ಓಪನ್: ಫೆಡರರ್‌ಗೆ ನಡಾಲ್ ಎದುರಾಳಿ

ಮೆಲ್ಬೋರ್ನ್, ಜ.27: ಸ್ಪೇನ್‌ನ ಸೂಪರ್ ಸ್ಟಾರ್ ರಫೆಲ್ ನಡಾಲ್ ಐದು ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ನಡಾಲ್ ಅವರು ರವಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸ್ವಿಸ್ ದಂತಕತೆ ರೋಜರ್ ಫೆಡರರ್‌ರನ್ನು ಎದುರಿಸಲಿದ್ದಾರೆ.
ಇಲ್ಲಿ ಶುಕ್ರವಾರ 4 ಗಂಟೆ, 56 ನಿಮಿಷಗಳ ಕಾಲ ನಡೆದ ಎರಡನೆ ಸೆಮಿ ಫೈನಲ್‌ನಲ್ಲಿ ನಡಾಲ್ ಅವರು ಗ್ರಿಗೊರ್ ಡಿಮಿಟ್ರೊವ್‌ರನ್ನು 6-3, 5-7, 7-6(7/5), 6-7(4/7), 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಟೆನಿಸ್ ದಿಗ್ಗಜರ ನಡುವಿನ ಫೈನಲ್ ಪಂದ್ಯ ವೀಕ್ಷಿಸಲು ವಿಶ್ವದ ಟೆನಿಸ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಇಬ್ಬರು ಹಿರಿಯ ಆಟಗಾರರ ಪೈಕಿ ಯಾರಿಗೆ ಪ್ರಶಸ್ತಿ ಒಲಿಯಲಿದೆ ಎಂದು ರವಿವಾರ ಗೊತ್ತಾಗಲಿದೆ.
Next Story





