ಪಡುಮಾರ್ನಾಡ್ ಗ್ರಾಮಸಭೆಯಲ್ಲಿ ತೆರಿಗೆ ಹೆಚ್ಚಳಕ್ಕೆ ತೀವ್ರ ವಿರೋಧ

ಮೂಡುಬಿದಿರೆ , ಜ.27 : ಗ್ರಾಮಸ್ಥರ ವಿರೋಧದಿಂದಾಗಿ ತೆರಿಗೆ ಹೆಚ್ಚಳವನ್ನು ನಿರ್ಧಾರವನ್ನು ಹಿಂಪಡೆದ ಪಡುಮಾರ್ನಾಡು ಗ್ರಾಮ ಪಂಚಾಯತ್ ಈ ವಿಚಾರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದಾಗಿ ಶುಕ್ರವಾರ ನಡೆದ ಗ್ರಾಮ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡಿದೆ.
ಗ್ರಾ.ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪಂಚಾಯತ್ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಪಂಚಾಯತ್ ನಿರ್ಣಯ ಕೈಗೊಳ್ಳಲಾಯಿತು.
ಪಂಚಾಯತ್‌ನಿಂದ ಪಡೆದಿರುವ ಅಂಗಡಿಕೋಣೆಗಳಿಗೆ ಬಾಡಿಗೆಯನ್ನು ಕಟ್ಟದಿರುವವರ ಬಗ್ಗೆ ಸೂಕ್ತ ್ರಮವನ್ನು ಕೈಗೊಳ್ಳುವುದುಹಾಗೂ ಎಸ್‌ಸಿ,ಎಸ್‌ಟಿ ಪಂಗಡದವರಿಗೆ ಅಂಗಡಿಕೋಣೆಗಳನ್ನು ಮೀಸಲಾಗಿಡಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಪಡುಮಾರ್ನಾಡು ಮತ್ತು ುೂಡುಮಾರ್ನಾಡಿನಲ್ಲಿ ಸ್ಮಶಾನ ಇಲ್ಲ ಎಂದು ಗ್ರಾಮಸ್ಥ ಭಾಸ್ಕರ್ ಕೋಟ್ಯಾನ್ ಆಗ್ರಹಿಸಿದಾಗ ಡೀಮ್ಡ್ ಫಾರೆಸ್ಟ್‌ನ ಸಮಸ್ಯೆಯಿಂದಾಗಿ ಸ್ಮಶಾನ ನಿರ್ಮಾಣಕ್ಕೆ ತೊಂದರೆಯಾಗಿದೆ ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿದರು.
ಪಂಚಾಯತ್‌ಗೆ ಬರುವ ಎಸ್‌ಸಿ,ಎಸ್‌ಟಿ ಅನುದಾನವನ್ನು ಎಸ್‌ಸಿ ಕಾಲನಿಗಳಿಗೆ ಮತ್ತು ಕುಟುಂಬಗಳಿಗೆ ವಿನಿಯೋಗಿಸುವಂತೆ, ಬಸವನ ಕಜೆಯಲ್ಲಿ ಅಂಬೇಡ್ಕರ್ ಸಭಾಭವನವನ್ನು ನಿರ್ಮಿಸುವಂತೆ, ಅಂಗನವಾಡಿ ಕೇಂದ್ರ ನಿರ್ಮಾಣ ಮತ್ತು ಕುಡಿಯುವ ನೀರಿನ ಬೋರ್‌ವೆಲ್‌ನ್ನು ಸರಿಪಡಿಸುವಂತೆ ಹಾಗೂ ಸರಕಾರಿ ಬಾವಿಯನ್ನು ದುರಸ್ಥಿಗೊಳಿಸುವಂತೆ ಾರ್ಡಿನ ಗ್ರಾಮಸ್ಥರು ಆಗ್ರಹಿಸಿದರು.
ತಾ.ಪಂ ಸದಸ್ಯ ಪ್ರಶಾಂತ್, ಸದಸ್ಯರುಗಳಾದ ರಮೇಶ್ ಶೆಟ್ಟಿ, ರಾಜು ಸಹಿತ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿಯನ್ನು ನೀಡಿದರು. ದಯಾನಂದ ಶೆಟ್ಟಿ ನೋಡ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಮೆಸ್ಕಾಂ ಕಿರಿಯ ಇಂಜಿನಿಯರ್ ಬಾಲಕೃಷ್ಣ ರಾವ್, ಪಂಚಾಯತ್‌ರಾಜ್ ಇಲಾಖೆಯ ಜಗದೀಶ ಜೆ., ಪಶುವೈದ್ಯಕೀಯ ಪರಿವೀಕ್ಷಕ ಡಾ ಲೀಲಾವತಿ, ವೈದ್ಯಾಧಿಕಾರಿ ಡಾ ಮಧುಸೂದನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ಶುಭ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ.ಬಿ, ಮೂಡುಬಿದಿರೆ ಠಾಣೆಯ ಪೊಲೀಸ್ ಉಪನಿರೀಕ್ಷಕ ದೇಜಪ್ಪ ಗ್ರಾಮಸಭೆಯಲ್ಲಿ ಭಾಗವಹಿಸಿದ್ದರು.







