ಮೂಡುಬಿದಿರೆ: ಎಸ್ಕೆಎಸ್‌ಎಸ್‌ಎಫ್ ವಲಯ ಸಮಿತಿ ಅಧ್ಯಕ್ಷರಾಗಿ ಮಾಲಿಕ್ ಅಝೀರ್

ಮೂಡುಬಿದಿರೆ , ಜ.27 : ಮೂಡುಬಿದಿರೆ ಎಸ್ಕೆಎಸ್‌ಎಸ್‌ಎಫ್ ವಲಯ ಸಮಿತಿಯ ಸಭೆಯು ಕೋಟೆಬಾಗಿಲಿನ ಕುವ್ವತುಲ್ ಇಸ್ಲಾಂ ಮದರಸದಲ್ಲಿ ವಲಯಾಧ್ಯಕ್ಷರಾದ ಉಸ್ಮಾನ್ ಅಬ್ದುಲ್ಲಾರರ ಅಧ್ಯಕ್ಷತೆಯಲ್ಲಿ ನಡೆಯಿತು.
ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಸ್ಸಲಾಂ ಯಮಾನಿ ದುಆ ನೆರವೇರಿಸಿ ಅಗಲಿದ ಸಮಸ್ತ ನೇತಾರರ ತ್ಯಾಗ ಜೀವನವನ್ನು ಸ್ಮರಿಸುತ್ತಾ ಸತ್ಯ ಪಥ ಸಮಸ್ತವನ್ನು ಬಲಿಷ್ಠಗೊಳಿಸಲು ಕೆನೀಡಿ ಸಭೆಯನ್ನು ಉದ್ಘಾಟಿಸಿದರು.
ಫಾರೂಖ್ ವಿಶಾಲನಗರ ವರದಿ ವಾಚಿಸಿದರು.
ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀರ್ ಮಾಲಿಕ್, ಉಪಾಧ್ಯಕ್ಷರಾಗಿ ಶಾಫಿ ಕಿರೋಡಿ, ಶಮೀರ್ ಗಂಟಾಲ್ಕಟ್ಟೆ, ರಹೀಮ್ ಮಾರ್ನಾಡು, ಹಮೀದ್ ಸಂಶುದ್ದೀನ್ ಮೂಡುಬಿದಿರೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಕೋಟೆಬಾಗಿಲು ಕಾರ್ಯದರ್ಶಿಗಳಾಗಿ ಲಿಯಾಖತ್ ಅಲಿ ಜ್ಯೋತಿನಗರ, ಅಲ್ತಾಫ್ ಈದ್ಗಾ, ಅಬ್ದುಲ್ ಗಫೂರ್ ಕೋಟೆಬಾಗಿಲು, ಕೋಶಾಧಿಕಾರಿಯಾಗಿ ನಝೀರ್ ಫೈಝಿ ತೋಡಾರು, ಸಂಘಟನಾ ಕಾರ್ಯದರ್ಶಿಯಾಗಿ ಫಾರೂಖ್ ವಿಶಾಲನಗರ, ಜಿಲ್ಲಾ ಕೌನ್ಸಿಲ್ ಗಳಾಗಿ ಶಬೀರ್ ಅಹಮದ್ ಅಂಗರಕರ್ಯ, ಉಸ್ಮಾನ್ ಅಬ್ದುಲ್ಲಾ, ಆಸಿಫ್.ಎಂ.ಎಸ್. ಜ್ಯೋತಿನಗರ ಇವರನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಸ್ಟರ್ ಅಧ್ಯಕ್ಷ ಎನ್.ಇಸ್ಮಾಯಿಲ್ ಉಪಸ್ಥಿತರಿದ್ದರು.
ಮಾನವ ಸರಪಳಿ ಯಶಸ್ಸಿಗೆ ಅಭಿನಂದನೆ:
ದ.ಕ ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್.ವತಿಯಿಂದ ಜ.26 ಪ್ರಜಾಪ್ರಭುತ್ವ ದಿನದಂದು "ರಾಷ್ಟ್ರ ರಕ್ಷಣೆಗೆ ಸೌಹಾರ್ದ ಸಂಕಲ್ಪ" ಎಂಬ ಧ್ಯೇಯವಾಕ್ಯದಲ್ಲಿ ನಡೆಸುತ್ತಿರುವ ’ಮಾನವ ಸರಪಳಿ’ ಕಾರ್ಯಕ್ರಮ ಈ ಬಾರಿ ಉಪ್ಪಿನಂಗಡಿಯಲ್ಲಿ ನಡೆದಿದ್ದು , ಇದರ ಅಭೂತಪೂರ್ವ ಯಶಸ್ಸಿಗೆ ಕಾರಣಕರ್ತರಾದ ವಲಯದ ವ್ಯಾಪ್ತಿಯ ಎಲ್ಲಾ ಶಾಖೆಗಳ ಸದಸ್ಯರು ಹಾಗೂ ಸಮಸ್ತಾಭಿಮಾನಿಗಳನ್ನು ಅಭಿನಂದಿಸಿದರು.







