ಕೆಎಸ್‌ಆರ್‌ಟಿಸಿ ಬಸ್-ಪೊಲೀಸ್ ಜೀಪ್ ಮುಖಾಮುಖಿ ಢಿಕ್ಕಿ : ಪೊಲೀಸ್ ಇನ್ಸ್‌ಪೆಕ್ಟರ್ ಸಹಿತ ಇಬ್ಬರು ಮೃತ
ಇಬ್ಬರು ಪೇದೆಗಳಿಗೆ ಗಾಯ

ಮೈಸೂರು, ಜ.28: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಪೊಲೀಸ್ ಜೀಪ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೃತಪಟ್ಟಿದ್ದು, ಇತರ ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ.
ಟೀ.ನರಸೀಪುರದ ಚಿಕ್ಕಳ್ಳಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ನರಸೀಪುರ ಕಡೆಯಿಂದ ಬರುತ್ತಿದ್ದ ಬಸ್ ಸುತ್ತೂರು ಜಾತ್ರೆಗೆ ಭದ್ರತೆಗಾಗಿ ತೆರಳುತ್ತಿದ್ದ ಪೊಲೀಸ್ ಜೀಪ್‌ಗೆ ಢಿಕ್ಕಿಯಾಗಿದೆ.
ಜೀಪ್‌ನಲ್ಲಿದ್ದ ಮೈಸೂರು ಜಿಲ್ಲಾ ಅಪರಾಧ ತನಿಖಾ ದಳದ ಇನ್ಸ್‌ಪೆಕ್ಟರ್ ಮಹೇಶ್ ಕುಮಾರ್ ತೀವ್ರ ಗಾಯಗೊಂಡಿದ್ದು, ಬಳಿಕ ಅವರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜೀಪ್ ಚಲಾಯಿಸುತ್ತಿದ್ದ ಪೇದೆ ಲಕ್ಷ್ಮಣ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನಿಬ್ಬರು ಪೇದೆಗಳಿಗೆ ಗಾಯವಾಗಿದೆ. ಸಿದ್ದಾರ್ಥ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





