ಉತ್ತರ ಪ್ರದೇಶ ಚುನಾವಣೆ : ನಾಳೆ ಅಖಿಲೇಶ್-ರಾಹುಲ್ ಜಂಟಿ ಪ್ರಚಾರ

ಲಕ್ನೋ,ಜ.28: ‘‘ಯುಪಿ ಕೋ ಯಹ್ ಸಾಥ್ ಪಸಂದ್ ಹೈ (ಉ.ಪ್ರದೇಶಕ್ಕೆ ಈ ಮೈತ್ರಿ ಇಷ್ಟವಿದೆ) ಎಂಬ ಘೋಷವಾಕ್ಯದೊಡನೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಿಧಾನಸಭಾ ಚುನಾವಣೆಗಾಗಿ ರವಿವಾರ ಇಲ್ಲಿ ಜಂಟಿ ಪ್ರಚಾರವನ್ನು ನಡೆಸಲಿದ್ದಾರೆ.
ಎಸ್‌ಪಿ-ಕಾಂಗ್ರೆಸ್ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಒಟ್ಟಿಗೆ ಸೇರಲಿರುವ ಉಭಯ ನಾಯಕರು ಮಧ್ಯಾಹ್ನ ಜಂಟಿ ಸುದ್ದಿಗೋಷ್ಠಿಯ ಬಳಿಕ ರೋಡ್ ಶೋ ನಡೆಸಲಿದ್ದಾರೆ ಎಂದು ಹಿರಿಯ ಎಸ್‌ಪಿ ನಾಯಕರೋರ್ವರು ತಿಳಿಸಿದರು.
ಉಭಯ ನಾಯಕರ ಜಂಟಿ ರೋಡ್ ಶೋ ಮಾರ್ಗವನ್ನು ಮುಸ್ಲಿಮ್ ಬಾಹುಳ್ಯವಿರುವ ಮತ್ತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳ ಮೂಲಕ ಹಾದು ಹೋಗುವಂತೆ ನಿಗದಿಗೊಳಿಸಲಾಗಿದೆ ಎಂದರು.
Next Story





