ಜೀವ ರಕ್ಷಕ ಪ್ರಶಸ್ತಿ ಪ್ರದಾನ

ಮಂಗಳೂರು, ಜ.28: ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಡಿ ಅಪಘಾತದಂತಹ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದ ಚಿಕಿತ್ಸೆ ಒದಗಿಸಲು ಹಾಗೂ ಜೀವ ಉಳಿಸಲು ನೆರವಾಗುವ ದಯಾಳುಗಳಿಗೆ, ಸ್ಪಂದನೆ ನೀಡುವ ಪರೋಪಕಾರಿಗಳಿಗೆ ಜೀವ ರಕ್ಷಕ ಪ್ರಶಸ್ತಿಯನ್ನು ಜನವರಿ 26ರಂದು ಜಿಲ್ಲಾ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಿ, ಗೌರಸಲಾಯಿತು.
ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾದವರು ಪ್ರಥಮ- ಹಸನಬ್ಬ ಚಾರ್ಮಾಡಿ, ದ್ವಿತೀಯ-ಸಿ.ಎಚ್. ಅಬ್ದುಲ್ ಗಫೂರ್ ಮೂಡಬಿದ್ರೆ, ತೃತೀಯ-ಮನೋಹರ, ಸುಳ್ಯ ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಿ, ಪ್ರಮಾಣ ಪತ್ರ, ಫಲಕ ನೀಡಿದರು ಎಂದರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.
Next Story





