ಬ್ಯಾಗೇಜ್‌ನಲ್ಲಿ ಬಾಂಬಿದೆ ಎಂದ ಪ್ರಯಾಣಿಕನ ಬಂಧನ

ನೆಡುಂಬಶ್ಶೇರಿ,ಜ.28: ವಿಮಾನ ನಿಲ್ದಾಣದಲ್ಲಿ ಗಣರಾಜ್ಯೋತ್ಸವದ ದಿನ ಇಮಿಗ್ರೇಶನ್ ತಪಾಸಣೆಯ ವೇಳೆ ಬ್ಯಾಗೇಜ್‌ನಲ್ಲಿ ಬಾಂಬ್ ಇದೆ ಎಂದು ತಮಾಶೆಗೆ ಹೇಳಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಎರ್ನಾಕುಲಂ ಕಡವತ್ರ ಮನೋಜ್(43) ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ವ್ಯಾಪಾರಿಯಾಗಿರುವ ಈತ ಬೆಂಗಳೂರಿಗೆ ಏರ್ ಏಷ್ಯ ವಿಮಾನದ ಮೂಲಕ ಹೋಗಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಎನ್ನಲಾಗಿದೆ.
ಹ್ಯಾಂಡ್ ಬ್ಯಾಗ್‌ನಲ್ಲಿ ಏನಿದೆ ಎಂದು ಇಮಿಗ್ರೇಶನ್ ಅಧಿಕಾರಿಗಳು ಕೇಳಿದಾಗ ಬಾಂಬ್ ಇದೆ ಎಂದು ತಮಾಶೆಗೆ ಹೇಳಿದ್ದು ಮನೋಜ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿತ್ತು. ಕೂಡಲೇ ಇಮಿಗ್ರೇಶನ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿರುವ ವಿವಿಧ ಏಜೆನ್ಸಿಗಳಿಗೆ ದೂರು ನೀಡಿದರು. ಬ್ಯಾಗೇಜ್ ತೆರೆದು ನೋಡಿದ ಬಳಿಕ ಈತನನ್ನು ನೆಡುಂಬಾಶ್ಶೇರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ವರದಿ ತಿಳಿಸಿದೆ.
Next Story





