ಶೆಟ್ಟಿಬೆಟ್ಟು ದೈವಸ್ಥಾನದ ಬ್ರಹ್ಮಕಲಶೋತ್ಸವ
ಉಡುಪಿ, ಜ.28: ಪರ್ಕಳ ಶೆಟ್ಟಿಬೆಟ್ಟುವಿನ ಶ್ರೀಮಹಾಕಾಳಿ ಬೊಬ್ಬರ್ಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಕಾಲಾವಧಿ ನೇಮೋತ್ಸವವನ್ನು ಜ.31ರಿಂದ ಫೆ.2ರವರೆಗೆ ಹಮ್ಮಿಕೊಳ್ಳಲಾಗಿದೆ.
31ರಂದು ಸಂಜೆ 4:30ಕ್ಕೆ ಹೊರೆಕಾಣಿಕೆ ಮೆರವಣಿಗೆ, ಫೆ.1ರಂದು ಬೆಳಗ್ಗೆ 10ಗಂಟೆಗೆ ಮಹಾಕಾಳಿ, ಮಾರಿದೇವತೆ, ಪರಿವಾರ ದೈವಗಳ ಪುನಃಪ್ರತಿಷ್ಠೆ ಕಲಶಾಭಿಷೇಕ, ಪ್ರಸನ್ನ ಪೂಜೆ ಮತ್ತು ಫೆ.2ರಂದು ವೇದಮೂರ್ತಿ ಹೆರ್ಗ ಶ್ರೀನಿವಾಸ ತಂತ್ರಿ ಮಾರ್ಗದರ್ಶನದಲ್ಲಿ ರಾಘವೇಂದ್ರ ತಂತಿಯವರ ನೇತೃತ್ವ ಲ್ಲಿ ಬ್ರಹ್ಮಕಲಶೋತ್ಸವ ಜರಗಲಿದೆ.
ಸಂಜೆ 6.30ಕ್ಕೆ ಜರಗುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಮುಖ್ಯ ಅತಿಥಿಗಳಾಗಿ ಸಚಿವ ಪ್ರಮೋದ್ ಮಧ್ವರಾಜ್, ಡಾ.ಜಿ.ಶಂಕರ್ ಮೊದಲಾ ದವರು ಭಾಗವಹಿಸಲಿರುವರು ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪುರಂದರದಾಸ ರೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಅಪ್ಪು ಮರಕಾಲ, ಗೌರವಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.
Next Story





