ಮೆಡಿಟರೇನಿಯನ್ ಸಮುದ್ರದಿಂದ 1,000 ವಲಸಿಗರ ರಕ್ಷಣೆ :ಓರ್ವನ ಮೃತದೇಹ ಪತ್ತೆ

ರೋಮ್, ಜ. 28: ಮೆಡಿಟರೇನಿಯನ್ ಸಮುದ್ರದ ಮಧ್ಯ ಭಾಗದಲ್ಲಿ ಶುಕ್ರವಾರ ಸೋರುತ್ತಿರುವ ದೋಣಿಗಳಿಂದ ಸುಮಾರು 1,000 ವಲಸಿಗರನ್ನು ರಕ್ಷಿಸಲಾಗಿದೆ ಎಂದು ಇಟಲಿಯ ತಟ ರಕ್ಷಣಾ ಪಡೆ ತಿಳಿಸಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ಇಟಲಿಯ ಒಂದು ತಟ ರಕ್ಷಣಾ ಹಡಗು, ಸ್ಪೇನ್‌ನ ಮಾನವೀಯ ನೆರವು ಸಂಸ್ಥೆ ‘ಪ್ರೊಆ್ಯಕ್ಟಿವ ಓಪನ್ ಆರ್ಮ್ಸ್’ ಮತ್ತು ಕೆರಿಬಿಯದ ಸರಕು ಹಡಗೊಂದು ಆರು ರಬ್ಬರ್ ದೋಣಿಗಳು ಮತ್ತು ಮೂರು ಮರದ ದೋಣಿಗಳಲ್ಲಿ ಪ್ರಯಾಣಿಸುತ್ತಿದ್ದವರ ನೆರವಿಗೆ ಧಾವಿಸಿದವು.
‘‘ಒಂದು ರಬ್ಬರ್ ದೋಣಿಯಿಂದ ಒಂದು ಮೃತದೇಹವನ್ನು ಪತ್ತೆಹಚ್ಚಲಾಗಿದೆ’’ ಎಂದು ತಟರಕ್ಷಣಾ ಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ವಲಸಿಗರು ಎಲ್ಲಿಯವರು ಎಂಬ ವಿವರಗಳನ್ನು ಅದು ನೀಡಿಲ್ಲ.
ಕಳೆದ ವರ್ಷ ದಾಖಲೆಯ 1.81 ಲಕ್ಷ ಆಫ್ರಿಕನ್ ವಲಸಿಗರು ದೋಣಿಗಳ ಮೂಲಕ ಇಟಲಿ ತಲುಪಿದ್ದಾರೆ.
Next Story





