5 ಇರಾಕಿಗಳಿಗೆ ನ್ಯೂಯಾರ್ಕ್‌ಗೆ ಹೋಗುವ ವಿಮಾನ ಏರಲು ನಿರಾಕರಣೆ

ಕೈರೋ, ಜ. 28: ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಐವರು ಇರಾಕ್ ಪ್ರಯಾಣಿಕರು ಮತ್ತು ಓರ್ವ ಯಮನ್ ಪ್ರಜೆ ಕೈರೋದಿಂದ ನ್ಯೂಯಾರ್ಕ್‌ಗೆ ಹೋಗುವ ವಿಮಾನ ಏರುವುದನ್ನು ತಡೆಯಲಾಗಿದೆ ಎಂದು ಕೈರೋ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಆರು ಪ್ರಯಾಣಿಕರು ಸಕ್ರಮ ವಲಸೆ ವೀಸಾಗಳನ್ನು ಹೊಂದಿದ್ದರೂ ಅವರು ಕೈರೋದಲ್ಲಿ ಈಜಿಪ್ಟ್‌ಏರ್ ವಿಮಾನವನ್ನು ಏರುವುದನ್ನು ತಡೆಯಲಾಯಿತು.
Next Story





