ಮೆಕ್ಸಿಕೊ, ಅಮೆರಿಕ ಅಧ್ಯಕ್ಷರ ಫೋನ್ ಮಾತುಕತೆ

ಮೆಕ್ಸಿಕೊ ಸಿಟಿ (ಮೆಕ್ಸಿಕೊ), ಜ. 28: ಅಮೆರಿಕ ಮತ್ತು ಮೆಕ್ಸಿಕೊಗಳ ಗಡಿಯಲ್ಲಿ ಗೋಡೆ ಕಟ್ಟುವ ವಿಚಾರದಲ್ಲಿ ಉಭಯ ದೇಶಗಳ ನಡುವೆ ಉದ್ಭವಿಸಿರುವ ರಾಜತಾಂತ್ರಿಕ ಉದ್ವಿಗ್ನತೆಯನ್ನು ಶಮನ ಮಾಡಲು ಉಭಯ ದೇಶಗಳ ಅಧ್ಯಕ್ಷರು ಮುಂದಾಗಿದ್ದಾರೆ.
ಜಟಿಲ ವಿವಾದಕ್ಕೆ ಪರಿಹಾರವೊಂದನ್ನು ಕಂಡುಹಿಡಿಯಲು ಮೆಕ್ಸಿಕೊದ ಅಧ್ಯಕ್ಷ ಎನ್ರಿಕ್ ಪೆನ ನೀಟೊ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ.
ಮುಂದಿನ ವಾರದ ತನ್ನ ವಾಶಿಂಗ್ಟನ್ ಭೇಟಿಯನ್ನು ಮೆಕ್ಸಿಕೊ ಅಧ್ಯಕ್ಷರು ರದ್ದುಪಡಿಸಿದ ಒಂದು ದಿನದ ಬಳಿಕ, ಉಭಯ ನಾಯಕರು ಸುದೀರ್ಘ ಫೋನ್ ಮಾತುಕತೆಯನ್ನು ನಡೆಸಿದರು.
ಗಡಿ ಗೋಡೆಯ ವೆಚ್ಚವನ್ನು ಮೆಕ್ಸಿಕೊ ಪಾವತಿಸಬೇಕು ಎಂಬ ವಿಚಾರದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ತಲೆದೋರಿತ್ತು.
Next Story





