ಪ್ರಬಂಧ ಸ್ಪರ್ಧೆ ವಿಜೇತರಿಗೆ ಎಸ್.ಐ.ಓ ನಿಂದ ಬಹುಮಾನ ವಿತರಣೆ
.jpg)
ಮಂಗಳೂರು,ಜ.28: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಉಳ್ಳಾಲ ಶಾಖೆಯ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ `ನನ್ನ ಭಾರತ, ನನ್ನ ಕನಸು' ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಬಬ್ಬುಕಟ್ಟೆಯ ಸರಕಾರಿ ಪ್ರೌಢಶಾಲೆ, ಕಲ್ಲಾಪುವಿನ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಆಡಂಕುದ್ರುವಿನ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು.
ಸಂಯೋಜಕರಾಗಿ ಎಸ್ ಐ ಓ ಉಳ್ಳಾಲ ಕಾರ್ಯದರ್ಶಿ ಸಯ್ಯಾಫ್ ಕಲ್ಲಾಪು, ಮುಶರ್ರಫ್ ಬಬ್ಬುಕಟ್ಟೆ, ತಾಜುದ್ದೀನ್ ತೊಕ್ಕೊಟ್ಟು, ಶಾಹಿಮ್, ಜವಾದ್ ಕೆ.ಸಿ.ರೋಡ್ ಭಾಗವಹಿಸಿದರು.
Next Story





