Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಆದಾಯ ತೆರಿಗೆ ರದ್ದುಪಡಿಸಿ ಕಪ್ಪು...

‘ಆದಾಯ ತೆರಿಗೆ ರದ್ದುಪಡಿಸಿ ಕಪ್ಪು ಹಣವನ್ನು ನಿಯಂತ್ರಿಸಬೇಕು’

‘ನೋಟುಗಳ ಅಮೌಲ್ಯೀಕರಣ ಪರಿಣಾಮ’ ಕುರಿತು ಸುಬ್ರಹ್ಮಣ್ಯ ಸ್ವಾಮಿ

ವಾರ್ತಾಭಾರತಿವಾರ್ತಾಭಾರತಿ28 Jan 2017 10:26 PM IST
share
‘ಆದಾಯ ತೆರಿಗೆ ರದ್ದುಪಡಿಸಿ ಕಪ್ಪು ಹಣವನ್ನು ನಿಯಂತ್ರಿಸಬೇಕು’

ಮಣಿಪಾಲ, ಜ.28: ಯಾವುದೇ ಪೂರ್ವಸಿದ್ಧತೆಗಳಿಲ್ಲದೇ ಕೈಗೊಳ್ಳಲಾದ 500 ಮತ್ತು 1,000ರೂ. ನೋಟುಗಳ ಅವೌಲ್ಯೀಕರಣದಿಂದ ದೇಶಾದ್ಯಂತ ಉಂಟಾದ ಘೋರ ಪರಿಣಾಮಗಳಿಂದ ಹೊರಬರಲು ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಹಗರಣಗಳಲ್ಲಿ ಭಾಗೀದಾರರಾಗಿರುವ ತುತ್ತತುದಿಯ ವ್ಯಕ್ತಿಗಳನ್ನು ಬಾಧ್ಯಸ್ಥರನ್ನಾಗಿ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಹಾಗೂ ಆರ್ಥಿಕ ತಜ್ಞ ಡಾ.ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ.

ಸ್ಥಾಪನೆಯ ವಜ್ರಮಹೋತ್ಸವನ್ನಾಚರಿಸುತ್ತಿರುವ ಮಣಿಪಾಲ ಇನ್‌ಸ್ಟಿಟ್ಟೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ವಜ್ರಮಹೋತ್ಸವ ಉಪನ್ಯಾಸ ಸರಣಿಯಲ್ಲಿ ಮೊದಲನೇಯದಾಗಿ ‘ಭಾರತೀಯ ಆರ್ಥಿಕತೆಯ ಮೇಲೆ ನೋಟುಗಳ ಅಪಮೌಲ್ಯೀಕರಣದ ಪ್ರಭಾವ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡುತಿದ್ದರು.

ನೋಟುಗಳ ಅವೌಲ್ಯೀಕರಣ ಎಂಬುದು ಯಾವೊಂದು ಪೂರ್ವಸಿದ್ಧತೆ ಗಳನ್ನು ಮಾಡಿಕೊಳ್ಳದೇ ಸಂಪೂರ್ಣ ನಿಷ್ಪ್ರಯೋಜಕ ಕ್ರಮವಾಗಿದ್ದು, ಇದರಿಂದ ದೇಶದ ಜನತೆಗೆ ಭಾರೀ ತೊಂದರೆಯಾಗಿದೆ. ನೋಟುಗಳ ಅವೌಲ್ಯೀಕರಣ ಎಂಬುದು ದಶಕದ ಅತ್ಯಂತ ಮಹತ್ವದ ನಡೆಯಾಗಿದ್ದು, ಸಮಾಜವನ್ನು ಪರಿಶುದ್ಧ ಸಮಾಜವಾಗಿ ಪರಿವರ್ತಿಸುವ ಪ್ರಯತ್ನದ ಒಂದು ಭಾಗವಾಗಿತ್ತು ಎಂದು ಸ್ವಾಮಿ ಸಮರ್ಥಿಸಿಕೊಂಡರು.

2014ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ನರೇಂದ್ರ ಮೋದಿ ಅವರು ಚುನಾವಣೆಗೆ ವ್ಯೆಹಾತ್ಮಕ ತಂತ್ರಗಳನ್ನು ರೂಪಿಸಲು ರಚಿಸಿ ತನ್ನ ಅಧ್ಯಕ್ಷತೆಯ ಸಮಿತಿ, ದೇಶದ ಕಪ್ಪು ಹಣವನ್ನು ನಿಯಂತ್ರಿಸಲು ನೋಟುಗಳ ಅವೌಲ್ಯೀಕರಣಗೊಳಿಸುವಂತೆ ಶಿಫಾರಸ್ಸು ಮಾಡಿತ್ತು ಎಂದು ಸ್ವಾಮಿ ಬಹಿರಂಗ ಪಡಿಸಿದರು.

ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳ ಬಳಿಕ ಈ ಶಿಫಾರಸ್ಸನ್ನು ನರೇಂದ್ರ ಮೋದಿ ಅವರು ಕಪ್ಪು ಹಣದ ನಿರ್ಮೂಲನೆಗಾಗಿ ಜಾರಿಗೊಳಿಸಲು ಮುಂದಾಗಿದ್ದರು. ನ.8ರಂದು ಮೋದಿ ಅವರು 500 ಹಾಗೂ 1000ರೂ. ನೋಟುಗಳನ್ನು ನಿಷೇಧಿಸಿ ದೇಶವನ್ನು ಅಚ್ಚರಿಗೊಳಿಸಿದರು. ಇದೀಗ ಎಲ್ಲರೂ ಕೇಳುವ ಪ್ರಶ್ನೆ ಎಂದರೆ ಇದರಿಂದ ಎಷ್ಟು ಪ್ರಮಾಣದ ಕಪ್ಪು ಹಣವನ್ನು ನಿರ್ಮೂಲನ ಮಾಡಲು ಸಾಧ್ಯವಾಗಿದೆ ಎಂಬುದಾಗಿದೆ ಎಂದರು.

2014ರಲ್ಲಿ ಸಮಿತಿ ಮಾಡಿದ ಶಿಫಾರಸ್ಸುಗಳಲ್ಲಿ ನೋಟು ಅವೌಲ್ಯೀಕರಣದ ವೇಳೆ ಇಂಥ ನೋಟುಗಳ ಆರು ಪಟ್ಟು 100ರೂ.ಗಳ ನೋಟುಗಳನ್ನು ಮುದ್ರಿಸಿರಬೇಕು. ಇದರೊಂದಿಗೆ 200ರೂ.ವೌಲ್ಯದ ನೋಟುಗಳನ್ನು ಸಹ ಮುದ್ರಿಸುವಂತೆ ಸಲಹೆ ನೀಡಲಾಗಿತ್ತು ಎಂದರು. ಅಷ್ಟೇ ಅಲ್ಲದೇ ನೋಟುಗಳ ಗಾತ್ರವನ್ನು ಉಳಿಸಿಕೊಳ್ಳುವಂತೆ, ಇಲ್ಲದಿದ್ದರೆ ಎಟಿಎಂಗಳಲ್ಲಿ ಹಣ ಪಡೆಯಲು ಆಗುವ ಸಮಸ್ಯೆಗಳ ಕುರಿತಂತೆ ಸಮಿತಿ ಗಮನ ಸೆಳೆದಿತ್ತು.

ಆದರೆ ಈ ಬಗ್ಗೆ ಯಾವೊಂದು ಪೂರ್ವ ತಯಾರಿಯನ್ನು ಮಾಡಿಕೊಳ್ಳದೇ ಹಠಾತ್ತನೇ ನೋಟುಗಳ ಅವೌಲ್ಯೀಕರಣ ಮಾಡಿರುವುದೇ ದೇಶದ ಜನತೆ ಅನಂತರ ಎದುರಿಸಿದ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ ಎಂದು ಸುಬ್ರಹ್ಮಣ್ಯ ಸ್ವಾಮಿ ಬೊಟ್ಟು ಮಾಡಿ ಹೇಳಿದರು. ನೋಟುಗಳ ಅವೌಲ್ಯೀಕರಣ ದಿಂದ ಭಯೋತ್ಪಾದಕರ ಚಟುವಟಿಕೆ ಮಾತ್ರ ಹತೋಟಿಗೆ ಬಂದಿದೆ ಎಂದರು.

ಕಪ್ಪು ಹಣ ಹಿಂದಿದ್ದ ಪ್ರಮಾಣದಲ್ಲೇ ಉಳಿದುಕೊಂಡಿದೆ. ಇದರಿಂದ ಕಪ್ಪು ಹಣ ಇದ್ದವ, ನೋಟುಗಳ ಪ್ರಮಾಣದ ಶೇ.75ನ್ನು ಮಾತ್ರ ಪಡೆದರೆ, ಬ್ಯಾಂಕ್ ಅಧಿಕಾರಿಗಳು ಹಾಗೂ ದಲ್ಲಾಳಿಗಳು ಶೇ.25ರಷ್ಟು ಹೆಚ್ಚು ಶ್ರೀಮಂತರಾಗಲು ಸಾಧ್ಯವಾಗಿದೆ ಎಂದರು.

ಜನಸಾಮಾನ್ಯರಿಗೆ ಯಾವೊಂದು ಸೂಚನೆ ನೀಡದೇ ಹಠಾತ್ತನೇ ಈ ಕ್ರಮ ಕೈಗೊಂಡಿದ್ದರಿಂದ ಅವರು ತೀವ್ರ ರೀತಿಯಲ್ಲಿ ಸಮಸ್ಯೆಗೆ ಸಿಲುಕಬೇಕಾಯಿತು. ಇದರೊಂದಿಗೆ ಹಣಕಾಸು ಸಚಿವಾಲಯವೂ ಬದಲಿ ಯಾವುದೇ ತಂತ್ರಗಾರಿಕೆ ಮಾಡಿಕೊಳ್ಳದೇ ದಿನಕಳೆದಂತೆ ಜನರ ಪರಿಸ್ಥಿತಿ ಬಿಗಡಾಯಿಸಿತು. ಜನರ ಬಳಿ ಇದ್ದ ಕಪ್ಪುಹಣದ ಮೇಲೆ ಮಾತ್ರ ಸರಕಾರ ಗಮನ ಕೇಂದ್ರೀಕರಿಸಿತ್ತು. ಇದು ತೆರಿಗೆ ವಂಚಿಸಿ, ಕೂಡಿಟ್ಟ ಹಣವಾಗಿತ್ತು. ತೆರಿಗೆ ವಂಚಿಸಿ ಕೂಡಿಟ್ಟ ಹಣ ಕಪ್ಪು ಹಣವಾಗಿತ್ತು ಎಂದರು.

ದೇಶದ ಜಿಡಿಪಿಯ ಒಟ್ಟು ವ್ಯವಹಾರದಲ್ಲಿ ಶೇ.40ರಷ್ಟು ಕಪ್ಪು ಹಣ ಎಂಬುದು ಲೆಕ್ಕಾಚಾರ. ಇಂಥ ಹಣವನ್ನು ನಿರ್ಮೂಲನಗೊಳಿಸಲು ಹಣಕಾಸು ವ್ಯವಸ್ಥೆಯನ್ನು ಸರಳಗೊಳಿಸಬೇಕಾಗುತ್ತದೆ. ನೆಹರೂ ಅವರು ರಶ್ಯನ್ ಆರ್ಥಿಕತೆಯನ್ನು ಜಾರಿಗೊಳಿಸಿದ್ದರಿಂದ ದೇಶದಲ್ಲಿ ಕಪ್ಪುಹಣ ಬೆಳೆಯಿತು ಎಂದು ಅಭಿಪ್ರಾಯ ಪಟ್ಟರು.

ಕಪ್ಪುಹಣವನ್ನು ತಡೆಗಟ್ಟು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆಯಾ ಬೇಕಾಗಿದೆ. ಇದರಿಂದ ಫಲಾನುಭವಿ ಬೇಗನೇ ಅದರ ಪ್ರಯೋಜನ ಪಡೆಯುವಂತೆ, ಅದನ್ನು ಮುರಿಯುವವನು ಶಿಕ್ಷೆಯನ್ನು ಅನುಭವಿಸುವಂತಾಗ ಬೇಕು. ದೇಶದ ಆರ್ಥಿಕತೆಯನ್ನು ಮೇಲಕ್ಕೆತ್ತಿದವರಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅಗ್ರಗಣ್ಯರು. ಅವರು ದೇಶದ ಆರ್ಥಿಕ ಸ್ಥಿತಿಯಲ್ಲಿ ಪವಾಡನ್ನೇ ನಡೆಸಿದರು ಎಂದು ಹೊಗಳಿದರು.

 ವ್ಯವಸ್ಥೆಯನ್ನು ಸರಳಗೊಳಿಸುವ ಮೂಲಕ ಕಪ್ಪು ಹಣವನ್ನು ನಿಯಂತ್ರಿಸಲು ಅವರು ಯಶಸ್ವಿಯಾದರು. ಕೋಟಾ ಮತ್ತು ಲೈಸನ್ಸ್‌ಗಳನ್ನು ರದ್ದುಗೊಳಿಸಲಾಯಿತು. ಇದರಿಂದ ದೇಶದ ಆರ್ಥಿಕ ಪ್ರಗತಿ ಏರುಮುಖವಾಗಿ ಐದು ವರ್ಷಗಳಲ್ಲಿ ಪ್ರಗತಿದರ ಶೇ.9ರ ದಾಖಲೆ ನಿರ್ಮಾಣಗೊಂಡಿತು.

ಹವಾಲಾ ಏಜೆಂಟ್‌ಗಳನ್ನು ಬಂಧಿಸುವ ಮೂಲಕ ಹಾಗೂ ಪ್ರಿಪರೇಟರಿ ನೋಟ್ಸ್‌ಗಳನ್ನು ನಿಷೇಧಿಸುವ ಮೂಲಕ ಕಪ್ಪು ಹಣವನ್ನು ನಿಯಂತ್ರಿಸಲು ಸಾಧ್ಯವಿದೆ. ಜನರಿಗೆ ಮೋಸ ಮಾಡದಿರಲು ಬಹುಮಾನ ನೀಡುವ ಮೂಲಕ , ಮೋಸ ಮಾಡುವ ಸಮಾಜದ ಉನ್ನತ ಶ್ರೇಣಿಯ ಜನರನ್ನು ಬಂಧಿಸುವ ಮೂಲಕ ಇದನ್ನು ನಡೆಸಬಹುದು ಎಂದವರು ಅಭಿಪ್ರಾಯ ಪಟ್ಟರು.

ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಸ್ವಾಗತಿಸಿದರೆ, ಮಣಿಪಾಲ ವಿವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸನ್ಮಾನಿಸಿದರು. ಬಳಿಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಡಾ.ಸ್ವಾಮಿ ಉತ್ತರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X