ಎ.ಕೆ.ಗ್ರೂಪ್‌ನಿಂದ ‘ಡೆಲ್ಲಿ ಫರ್ನಿಚರ್ ಇಂಟೀರಿಯರ್ ಡಿಸೈನ್ ಅವಾರ್ಡ್ಸ್’ ಪ್ರದಾನ

ಮಂಗಳೂರು, ಜ.28: ಎ.ಕೆ.ಗ್ರೂಪ್ ವತಿಯಿಂದ ಗುರುವಾರ ನಗರದ ಗೇಟ್‌ವೇ ಹೊಟೇಲ್‌ನಲ್ಲಿ ‘ಡೆಲ್ಲಿ ಫರ್ನಿಚರ್ ಇಂಟೀರಿಯರ್ ಡಿಸೈನ್ ಅವಾರ್ಡ್ಸ್ 2016’ ವಿತರಣಾ ಸಮಾರಂಭ ನಡೆಯಿತು.
ಅನ್ಡರ್ ಮ್ಯಾಗೋ ಟ್ರೀ ಇದರ ಸ್ಥಾಪಕ ಹಾಗೂ ನಿರ್ದೇಶಕ ಎ.ಆರ್.ಗೌರವ್ ಶರ್ಮಾ ಅವರು ಪ್ರಶಸ್ತಿಗಳನ್ನು ವಿತರಿಸಿದರು. ಜೀವಮಾನ ಸಾಧನೆ ಪ್ರಶಸ್ತಿಯನ್ನು ಆರ್ಕಿಟೆಕ್ಟ್ ಜಿ.ಮನೋಹರ್ ಅವರಿಗೆ ನೀಡಲಾಯಿತು. ವಿದ್ಯಾರ್ಥಿ ವಿಭಾಗದಲ್ಲಿ ಅನಸ್ ಅಬ್ದುಲ್ಲ ಮತ್ತು ಅಬ್ದುಲ್ ಅಮೀನ್ ಅವರು ಪ್ರಶಸ್ತಿಯನ್ನು ಪಡೆದುಕೊಂಡರು. ವಾಣಿಜ್ಯ ವಿಭಾಗದಲ್ಲಿ ಶಾನವಾಝ್ ಮತ್ತು ರೆಸಿಡೆನ್ಶಿಯಲ್ ವಿಭಾಗದಲ್ಲಿ ಸೋನಾಲ್ ಶೆಟ್ಟಿ ಪ್ರಶಸ್ತಿ ಪಡೆದುಕೊಂಡರು.
ಸಮಾರಂಭದಲ್ಲಿ ಎ.ಕೆ.ಗ್ರೂಪ್‌ನ ಅಧ್ಯಕ್ಷ ಎ.ಕೆ.ಅಹ್ಮದ್, ನಿರ್ದೇಶಕರಾದ ಅಬ್ದುಲ್ ರಝಾಕ್, ಎ.ಕೆ.ನಿಯಾಝ್, ಎ.ಕೆ.ನೌಶಾದ್, ಎ.ಕೆ.ನಾಝಿಮ್,ಎ.ಕೆ.ಸಾಜಿದ್, ಅನಿಲ್ ಕುಮಾರ್, ಸ್ವರಾಜ್ ಬೋರ್ಡ್‌ನ ಪ್ರೊಡಕ್ಟ್‌ನ ಆಡಳಿತ ನಿರ್ದೇಶಕ ಹನೀಫ್ ಪಿ.ಎಸ್., ಡೆಲ್ಲಿ ಫರ್ನಿಚರ್‌ನ ನಿರ್ದೇಶಕ ಹಾಗೂ ಆರ್ಕಿಟೆಕ್ಟ್ ಮುಹಮ್ಮದ್ ನಿಸಾರ್, ಡೆಲ್ಲಿ ಫರ್ನಿಚರ್ ನಿರ್ದೇಶಕರಾದ ಪ್ರವೀಣ್‌ಕುಮಾರ್ , ಬ್ರಿಜೇಶ್ ಶರ್ಮಾ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿಲಾಲ್ ರೈಫ್ ಎ.ಕೆ.ಸ್ವಾಗತಿಸಿದರು. ಮುಹಮ್ಮದ್ ನಿಸಾರ್ ವಂದಿಸಿದರು. ಸೈಫ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.







