ಮಹಿಳೆ ಕಾಣೆ
ಚಿಕ್ಕಮಗಳೂರು, ಜ.28: ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ನಿವಾಸಿ ಶಂಕ್ರಮ್ಮ(40) ಎಂಬವರು ಕಾಣೆಯಾಗಿರುವ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಂಕ್ರಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ 2ತಿಂಗಳುಗಳಿಂದ ತವರು ಮನೆಯಾದ ಶಿವನಿ ಗ್ರಾಮದಲ್ಲಿದ್ದರು. ಇತ್ತೀಚೆಗೆ ಆಸ್ಪತ್ರೆಗೆ ಹೋಗುವುದಾಗಿ ದಾವಣಗೆರೆಗೆ ತೆರಳಿದವರು ಮರಳಿ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಣ್ಣೆಗೆಂಪು ಮೈಬಣ್ಣ, ಕೊರಳಿನಲ್ಲಿ ಕರಿಮಣಿ ತಾಳಿ, ಕಪ್ಪು ಬಣ್ಣದ ಕೂದಲು, 5 ಅಡಿ ಎತ್ತರ,ದುಂಡ್ಡು ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಟಾಗ ನೀಲಿ ಬಣ್ಣದ ಸೀರೆ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ದೂ.ಸಂ: 08261- 245133/9480805164ನ್ನು, ಅಜ್ಜಂಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





