ಫಲಾನುಭವಿಗಳಿಗೆ ಆಟೋ ಕೀಲೀ ಕೈ ಹಸ್ತಾಂತರ

ಸುರತ್ಕಲ್, ಜ.28: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ 201617 ಸಾಲಿನ ಸ್ವಾವಲಂಬನಾ ಯೋಜನೆಯಡಿ ಮಂಗಳೂರು ಉತ್ತರ ವಲಯದಕ್ಕೆ ಮಂಜೂರಾದ ಆಟೋಗಳ ಫಲಾನುಭವಿಗಳಿಗೆ ಕೀಲೀ ಕೈ ಹಾಗೂ ಗಂಗಾಕಲ್ಯಾಣ ಯೋಜನೆಯ ಒಟ್ಟು 19 ಮಂದಿ ಫಲಾನುಭವಿಗಳಿಗೆ ಮಂಗಳೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ ಪ್ರಮಾಣ ಪತ್ರಗಳನ್ನು ಸುರತ್ಕಲ್‌ನ ಶಾಸಕರ ಕಚೇರಿ ಆವರಣದಲ್ಲಿ ಶನಿವಾರ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರರಾದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರಕಾರದ ಉತ್ತಮ ಯೋಜನೆಗಳ ಫಲವನ್ನು ಹಸ್ತಾಂತರಿಸಲಾಗಿದೆ ಎಂದರು.
94 ಸಿಸಿಯ ಕಾರ್ಯಗಳು ಪ್ರಗತಿಯಲ್ಲಿದ್ದು, ಶೀಘ್ರ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಶಾಸಕ ಮೊಯ್ದಿನ್ ಬಾವಾ ಇದೆ ವೇಳೆ ತಿಳಿಸಿದರು.
ಈ ಸಂದರ್ಭ ಮಂಗಳೂರು ಮನಾಪ ಕಾರ್ಪೊರೇಟರ್ ಪುರುಶೋತ್ತಮ ಚಿತ್ತಾಪುರ, ಎಂಟೆಕ್‌ನ ಸದಾಶಿವ ಶೆಟ್ಟಿ, ಗುರುಪುರ ಮಹಿಲಾ ಕಾಂಗ್ರೆಸ್‌ನ ಸರಿನಾ ಫೆರ್ನಾಂಡಿಸ್, ಕಮದಾವರ ಪಂಚಾಯತ್ ಉಪಾಧ್ಯಕ್ಷ ಇಲ್ಯಾಸ್, ಕಾಂಗ್ರೆಸ್‌ನ ಯುವ ಮುಖಂಡ ಜಲೀಲ್, ಕುಮಾರ್ ಮೆಂಡನ್, ರಾಘವೇಂದ್ರ ಭಟ್, ಮಾಜೀ ಕಾರ್ಪೊರೆಟರ್ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.







