ಮಂಗಳೂರು : ಗಾಂಜಾ ಮಾರಾಟ – ಓರ್ವನ ಬಂಧನ

ಮಂಗಳೂರು, ಜ.28: ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬರ್ಕೆ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಒಡಿಸ್ಸಾ ರಾಜ್ಯದ ಬಾಲೆಸರ್ ಜಿಲ್ಲೆಯ ಗೋಲಾ ಪೂಕರ ಚೌಕಿಯ ಲಕ್ಷ್ಮಣಕೋಟ ನಿವಾಸಿ ತನ್ವೀರ್ ಖಾನ್ (21) ಎಂದು ಗುರುತಿಸಲಾಗಿದೆ.
ಈತನಿಂದ 437 ಗ್ರಾಂ ಗಾಂಜಾ, 1 ಮೊಬೈಲ್ ಮತ್ತು 250 ರೂ. ಸಹಿತ ಒಟ್ಟು ವೌಲ್ಯ 10,925 ರೂ. ವೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಎಸಿಪಿ ಉದಯ ನಾಯಕ್ ಅವರ ಮಾರ್ಗದರ್ಶನದಲ್ಲಿ ಬರ್ಕೆ ಇನ್‌ಸ್ಪೆಕ್ಟರ್ ರಾಜೇಶ್ ಎ.ಕೆ.ಅವರ ನೇತೃತ್ವದಲ್ಲಿ ಕ್ರೈಂ ಎಸ್‌ಐ ನರೇಂದ್ರ, ಎಎಸ್‌ಐ ಪ್ರಕಾಶ್ ಕೆ., ಸಿಬ್ಬಂದಿಗಳಾದ ರಾಜೇಶ್ ಆಳ್ವಾ, ಗಣೇಶ್, ರಾಜೇಶ್ ಅತ್ತಾವರ,ಕಿಶೋರ್ ಕೋಟ್ಯಾನ್, ಜಯರಾಮ, ಕಿಶೋರ್ ಪೂಜಾರಿ, ನಾಗಪ್ಪ, ನಾಗರಾಜ, ಮಹೇಶ್ ಪಾಟೀಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





