ಮಹಾವೀರ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ದಿನಾಚರಣೆ

ಮೂಡುಬಿದಿರೆ,ಜ.28 :ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಜೊತೆಗೆ ಾಯಕತ್ವ ಗುಣವನ್ನು ಬೆಳೆಸಿಕೊಂಡರೆ, ಸ್ಪರ್ಧಾತ್ಮಕ ಬದುಕನ್ನು ಎದುರಿಸುವುದು ಸುಲಭ ಸಾಧ್ಯ ಎಂದು ಅದಾನಿ ಯುಪಿಸಿಎಲ್‌ನ ಕಾರ್ಯ ನಿರ್ದೇಶಕರು ಹಾಗೂ ಜಂಟಿ ಅಧ್ಯಕ್ಷರಾಗಿರುವ ಕಿಶೋರ್ ಆಳ್ವಾ ತಿಳಿಸಿದರು.
ಅವರು ಶ್ರೀ ಮಹಾವೀರ ಕಾಲೇಜು ಮೂಡಬಿದ್ರೆ ಇಲ್ಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ದಿನಾಚರಣೆ0ುಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮತ್ತೋರ್ವ ಅತಿಥಿಯಾಗಿ ಉಪಸ್ಥಿತರಿದ್ದ ಪತ್ರಕರ್ತಮನೋಹರ್ ಪ್ರಸಾದ್ ಸ್ವಾವಲಂಬಿ ಸಮಾಜವನ್ನು ಕಟ್ಟುವ ಜವಾಬ್ದಾರಿ ವಿದ್ಯಾಸಂಸ್ಥೆಗಳಿಗಿರುವುದರಿಂದವಿದ್ಯಾರ್ಥಿಗಳು ಇಂದು ಒತ್ತಡದ ನಡುವೆಯೂ, ನಾವು ಸಾಗಬೇಕಾದ ಹಾದಿ ಯಾವುದು ಎನ್ನುವುದರ ಕುರಿತು ಖಚಿತತೆ ಇರಬೇಕು . ಏಕಾಗ್ರತೆಯನ್ನು ಸಾಧಿಸಿಕೊಳ್ಳುವುದರಿಂದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಕಛೇರಿಯಲ್ಲಿ 41 ವರ್ಷಗಳ ಸೇವೆ ಸಲ್ಲಿಸಿದ ಕಛೇರಿ ಅಧೀಕ್ಷಕರಾದ ಮೋಹನ ಉಪಾಧ್ಯಾಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದ ಮೇ 2016 ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 4ನೇ ರ್ಯಾಂಕ್ ಪಡೆದ ವಾಸುದೇವ ಪ್ರಭು ಮತ್ತು ರಾಷ್ಟ್ರಮಟ್ಟದ ಪರ್ವತಾರೋಹಣದಲ್ಲಿ ಎ ಶ್ರೇಣಿ ಪಡೆದ ಕಾಲೇಜಿನ ಎನ್.ಸಿ.ಸಿ. ಕೆಡೆಟ್ ರಚನಗೌಡ ಪಾಟೀಲ್‌ರವರನ್ನುಸನ್ಮಾನಿಸಲಾಯಿತು.
ಕ್ರೀಡೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಕಿಶೋರ್ ಆಳ್ವಾ, ಶ್ರೀ ಮನೋಹರ ಪ್ರಸಾದ್ ಹಾಗೂ ಪ್ರೊ. ಚಂದ್ರಶೇಖರ್ ದೀಕ್ಷಿತ್ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ್ ದೀಕ್ಷಿತ್ ವಹಿಸಿದ್ದರು. ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಅಧಿಕಾರಿ ಪ್ರೊ. ಹರೀಶ್, ವಿದ್ಯಾರ್ಥಿ ನಾಯಕ ಅಲಿಸ್ಟರ್ ಜೋಸ್ವಿ ಲೋಬೋ ಹಾಗೂ ಸಂಘದ ಪದಾಧಿಕಾರಿಗಳಾದ ರಮ್ಯಾ ರಾವ್, ಜೋಸ್ವಿನ್ ಡಿಸೋಜ, ಗ್ಲಾಡ್‌ಸನ್ ಕಾರ್ಡೋಜಾ, ಗೌತಮಿ ಪೈ, ನಿತೇಶ್ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಗ್ಲಾಡ್‌ಸನ್ ಕಾರ್ಡೋಜಾ ವಿದ್ಯಾರ್ಥಿಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ರಮ್ಯಾ ರಾವ್ ಹಾಗೂ ಜಾಸ್ವಿನ್ ಡಿಸೋಜ ಅತಿಥಿಗಳ ಪರಿಚಯ ಮಾಡಿದರು. ಸನ್ಮಾನಿತರ ಪರಿಚಯವನ್ನು ನಿತೇಶ್ ಪಿ. ಶೆಟ್ಟಿ ಮಾಡಿದರು. ವಿದ್ಯಾರ್ಥಿ ನಾಯಕ ಆಲಿಸ್ಟರ್ ಲೋಬೋ ಅತಿಥಿಗಳನ್ನು ಸ್ವಾಗತಿಸಿದರು. ರಾಯ್ಚಲ್ ಶ್ವೇತಾ ವಂದಿಸಿದರು. ವೆನೆಸ್ಸಾ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು.







