ಬ್ಯಾಂಕಿನ ಸರದಿ ಸಾಲಿನಲ್ಲಿದ್ದ ವ್ಯಕ್ತಿ ವಿದ್ಯುದಾಘಾತಕ್ಕೆ ಬಲಿ
ಬಲ್ಲಿಯಾ(ಉ.ಪ್ರ),ಜ.28: ಇಲ್ಲಿಯ ಬ್ಯಾಂಕೊಂದರಿಂದ ಹಣವನ್ನು ಹಿಂಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ವಿದ್ಯುದಾಘಾತದಿಂದ ಮೃತರಾಗಿದ್ದಾರೆ.
ದುಮರಿ ಗ್ರಾಮದ ನಿವಾಸಿ ಪುರಣಮಾಸಿ(52) ನಿನ್ನೆ ಎಸ್‌ಬಿಐನ ಸಹತ್ವಾರ್ ಶಾಖೆಯಿಂದ ಹಣವನ್ನು ಹಿಂಪಡೆಯಲು ಸಾಲಿನಲ್ಲಿ ನಿಂತಿದ್ದರು. ಈ ಸಂದರ್ಭ ತನ್ನ ಕೈಯಲ್ಲಿದ್ದ ಬ್ಯಾಗ್‌ನ್ನು ಸಮೀಪದಲ್ಲಿದ್ದ ಬ್ಯಾಂಕಿನ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದ ಟ್ರಾಲಿಯ ಮೇಲಿಡಲು ಪ್ರಯತ್ನಿಸಿದಾಗ ಹಠಾತ್ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
Next Story





