ಖೋಟಾ ನೋಟು ಜಾಲ ಬಯಲಿಗೆ
ಹೊಸದಿಲ್ಲಿ,ಜ.28: ಬೃಹತ್ ಖೋಟಾ ನೋಟು ಜಾಲವೊಂದನ್ನು ಭೇದಿಸಿರುವ ದಿಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಆಝಾದ್,ಮನೋಜ್ ಮತ್ತು ಸುನಿಲ್ ಬಂಧಿತ ಆರೋಪಿಗಳಾಗಿದ್ದು, ಅವರಿಂದ 18 ಲಕ್ಷ ರೂ.ಗಳ 2,000 ರೂ.ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಆರೋಪಿಗಳ ಪೈಕಿ ಆಝಾದ್ ದಿಲ್ಲಿ ನಿವಾಸಿಯಾಗಿದ್ದರೆ, ಇತರ ಇಬ್ಬರು ಹರ್ಯಾಣದವರಾಗಿದ್ದಾರೆ.
Next Story





