ಅಜ್ಜಿನಡ್ಕದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ

ಅಜ್ಜಿನಡ್ಕ, ಜ.29: ನಾವು ವಹಿಸಿದ ಸಾಕ್ಷ್ಯ ವಚನವು ಹಾನಿಗೊಳಪಡದಂತೆ ಜಾಗೃತೆ ವಹಿಸಿರಿ, ಒಂದು ವೇಳೆ ಹಾನಿಗೊಳಪಟ್ಟು ಅದೇ ಅವಸ್ಥೆಯಲ್ಲಿ ಮರಣಹೊಂದಿದಲ್ಲಿ ನರಕ ಶಿಕ್ಷೆ ಶಾಶ್ವತ ಎಂದು ಮೌಲವಿ ಅಬ್ದುಲ್ಲಾಹ್ ಚುಯಲಿ ಅಭಿಪ್ರಾಯಪಟ್ಟರು.
ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಮಂಗಳೂರು ಹಮ್ಮಿಕೊಂಡಿರುವ ಕುರ್ ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ತಲಪಾಡಿ ಸಮೀಪದ ಅಜ್ಜಿನಡ್ಕದಲ್ಲಿ ಜ. 28ರಂದು ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನುದ್ದೇಶಿಸಿ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮವನ್ನು ಎಸ್ಕೆಎಸ್ಸೆಮ್ ದಅವಾ ಕಾರ್ಯದರ್ಶಿ ಎಂ.ಜಿ ಮುಹಮ್ಮದ್ ಉದ್ಘಾಟಿಸಿದರು. ಮಾಜಿ ಅದ್ಯಕ್ಷ ಅಹ್ಮದ್ ಅನ್ಸಾರ್, ಮಸ್ಜಿದ್ ಅಬ್ರಾರ್ ಅಧ್ಯಕ್ಷ ಜಿ.ಅಬ್ಬಾಸ್, ಮಸ್ಜಿದ್ ಬೈತುಲ್ಲಾಹ್ ಅಜ್ಜಿನಡ್ಕ ಟ್ರಸ್ಟೀ ಸಿ.ಎಂ ಅಬ್ಬಾಸ್, ಸಲಫಿ ಎಜುಕೇಶನ್ ಬೋರ್ಡ್ ಅಧ್ಯಕ್ಷ ಮೌಲವಿ ಮುಸ್ತಫ ದಾರಿಮಿ ಮತ್ತಿತರರು ಉಪಸ್ತಿತರಿದ್ದರು. ಅಬೂಬಿಲಾಲ್ ಎಸ್.ಎಂ ಸ್ವಾಗತಿಸಿದರು. ಎಸ್ಕೆಎಸ್ಸೆಮ್ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಧನ್ಯವಾದವಿತ್ತರು.
Next Story





