ಅಂಗನವಾಡಿ ಶಿಕ್ಷಕಿಯ ನಿಗೂಢ ಸಾವಿನ ತನಿಖೆ ವಿಳಂಬ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
.jpg)
ಕಾಸರಗೋಡು, ಜ.29: ಕುಂಬ್ಡಾಜೆ ಮುನಿಯೂರಿನ ಅಂಗನವಾಡಿ ಶಿಕ್ಷಕಿ ಆಯಿಷಾ ಎಂಬವರ ನಿಗೂಢ ಸಾವಿನ ತನಿಖೆ ವಿಳಂಬಗೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ರವಿವಾರ ಬೆಳಿಗ್ಗೆ ಬದಿಯಡ್ಕ ಪೊಲೀಸ್ ಠಾಣೆಗೆ ಜಾಥಾ ನಡೆಸಿ, ಪ್ರತಿಭಟನೆ ನಡೆಸಿತು.
ಬದಿಯಡ್ಕ ಗಣೇಶ ಮಂದಿರ ಪರಿಸರದಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಬಳಿಕ ಠಾಣಾ ಮುಂಭಾಗದಲ್ಲಿ ಧರಣಿ ಕುಳಿತರು. ಅಂಗನವಾಡಿ ಶಿಕ್ಷಕಿಯಾಗಿದ್ದ ಆಯಿಷಾರವರು ನವೆಂಬರ್ 24 ರಂದು ಏತಡ್ಕ ಆನೆಪಳ್ಳ ಎಂಬಲ್ಲಿನ ಮನೆಯಲ್ಲಿ ಮೃತಪಟ್ಟಿದ್ದರು.
ವಿಷ ಸೇವನೆಯಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿತ್ತು. ಪ್ರಕರಣದ ತನಿಖೆಯನ್ನು ಕಾಸರಗೋಡು ಡಿ ವೈಎಸ್ಪಿಯವರಿಗೆ ವಹಿಸಲಾಗಿದ್ದು, ತನಿಖೆ ವಿಳಂಬಗೊಳ್ಳುತ್ತಿದೆ ಎಂದು ಪ್ರತಿಭಟಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ಹಮ್ಮಿಕೊಂಡಿತು.
ಪ್ರತಿಭಟನೆಯನ್ನು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಉದ್ಘಾಟಿಸಿದರು.
Next Story





