ಎರಡು ಕಿಡ್ನಿ ವೈಫಲ್ಯಕ್ಕೊಳಗಾದ ಮಂಜುನಾಥ್ ಕುಟುಂಬಕ್ಕೆ ನೀವು ನೆರವಾಗಬಲ್ಲಿರಾ?
ಬಿಪಿಎಲ್ ಕಾರ್ಡ್ ಕೊಡದ ಅಧಿಕಾರಿಗಳು: ಸಂಕಟದಲ್ಲಿದೆ ಈ ಬಡ ಕುಟುಂಬ

ಚಿಕ್ಕಮಗಳೂರು, ಜ.29: ನಗರದ ಶಂಕರಪುರದ ನಿವಾಸಿ ಎಲ್.ಮಂಜುನಾಥ(37) ಎರಡು ಕಿಡ್ನಿಗಳ ವೈಫಲ್ಯದ ಪರಿಣಾಮ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೈರಾಣಾಗಿದ್ದು, ದಾನಿಗಳ ಸಹಾಯ ಹಸ್ತಕ್ಕಾಗಿ ಕಾದಿದ್ದಾರೆ.
ಕಡು ಬಡತನದಿಂದ ಜೀವನ ನಡೆಸಲು ಪರದಾಡುತ್ತಿರುವ ಅವರ ಕುಟುಂಬ ಬೀದಿ ಪಾಲಗುವ ಆತಂಕದಲ್ಲಿದೆ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ ಆಘಾತದಿಮದ ಸಮಸ್ಯೆ ಎದುರಿಸುವಂತಾಯಿತು. ರಕ್ತದ ಒತ್ತಡದಿಂದ ಬಳಲಿದ ಅವರು ಹಾಸನದ ವಾತ್ಸಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದಾಗ ಎರಡು ಕಿಡ್ನಿ ವೈಫಲ್ಯಗೊಂಡಿರುವುದು ತಿಳಿಯಿತು. ಸದ್ಯದ ಪರಿಸ್ಥಿತಿಯಲ್ಲಿ ವಾರಕ್ಕೆರಡೂ ಬಾರಿ ರಕ್ತದ ಚುಚ್ಚುಮದ್ದಿನ ಜೊತೆಗೆ ಡಯಾಲಿಸಿಸ್ ಮಾಡಿಸಬೇಕಾದರೆ ರೂ. 6,000 ಗಳು ಬೇಕು. ಬದುಕಲು ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ದಾನಿಗಳಿಂದ ಸಹಾಯ ಹಸ್ತ ಚಾಚಿ ನಿಂತಿದ್ದಾರೆ.
ಒಂದು ಕಡೆ 70 ವರ್ಷ ವಯ್ಯಸ್ಸಿನ ತಂದೆ ಪಾರ್ಶ್ವ ವಾಯು ಪೀಡಿತರಾಗಿದ್ದು, ಕೆಲಸ ಮಾಡಲು ಅವರಿಂದ ಸಾದ್ಯವಾಗುತ್ತಿಲ್ಲ. ವಯಸ್ಸಾದ ತಾಯಿಯ ಜೊತೆಗೆ ಹೆಂಡತಿ ಸಹಿತ 8 ವರ್ಷದ ಮಗಳು, 18 ತಿಂಗಳ ಮಗಳ ಜವಬ್ದಾರಿ ಮಂಜುನಾಥ್ ಹೆಗಲಲ್ಲಿದೆ. ತಮ್ಮ ಚಿಕಿತ್ಸೆಗೆ ಹಣಕಾಸು ಹೊಂದಿಸಲಿಕ್ಕಾಗಿ ಆಟೋವನ್ನು ಮಾರಿದ್ದಾರೆ. ಬಿಪಿಎಲ್ ಕಾರ್ಡ್ ಇದ್ದರೆ ಮಲ್ಲೇಗೌಡ ಸರಕಾರಿ ಆಸ್ಪತ್ರೆಯಲ್ಲಿ ರೂ. 100 ನೀಡಬೇಕು. ಎಪಿಎಲ್ ಕಾರ್ಡ್ ಇದ್ದರೆ ರೂ. 400 ನೀಡಬೇಕು. ಇವರಿಗೆ ಆ ಎರಡೂ ಕಾರ್ಡ್‌ಗಳ ಭಾಗ್ಯ ಇನ್ನೂ ದೊರಕದಿರುವುದು ಆತಂಕ ತಂದಿದೆ. ಬಡತನ ರೇಖೆಗಿಂತ ಕೆಳಗಿನವರಿಗೆ ಲಭ್ಯವಾಗುವ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಈ ತನಕ ಆಹಾರ ಇಲಾಖೆಗೆ ಅಲೆದಲೆದು ಸುಸ್ತಾಗಿದ್ದಾರೆ. ಕಿಡ್ನಿ ವೈಫಲ್ಯಕ್ಕೊಳಗಾದವರು ಡಯಾಲಿಸಿಸ್ ಮಾಡಿಸಬೇಕಾದರೆ 2 ತಿಂಗಳ ಮುಂಚೆ ನೋಂದಣಿ ಮಾಡಿಸಬೇಕು. ಹಾಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಗಳು ಸತ್ತಲ್ಲಿ ಅವರ ತೆರವಾದ ಸ್ಥಾನಕ್ಕೆ ಹೊಸಬರಿಗೆ ಅವಕಾಶ ಸಿಗುತ್ತದೆ. ಆದ್ದರಿಂದ ಸದ್ಯಕ್ಕೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ ಕಿಡ್ನಿ ವೈಫಲ್ಯಕ್ಕೊಳಗಾಗಿರುವ ಮಂಜುನಾಥ್.
ಕಿಡ್ನಿ ಜೊಡಣೆಗೆ ಲಕ್ಷಾಂತರ ರೂ.ಗಳ ಖರ್ಚು ಭರಿಸುವ ಶಕ್ತಿಯಂತೂ ಕಡು ಬಡತನದ ಬೇಗೆಯಲ್ಲಿ ಒದ್ದಾಡುತ್ತಿರುವ ಮಂಜುನಾಥ್ ಕುಟುಂಬಕ್ಕಿಲ್ಲ. ಈ ಹಂತದಲ್ಲಿ ದಾನಿಗಳು ತಮ್ಮ ಕೈಲಾದಷ್ಟು ಅವರ ಪತ್ನಿ ಅರ್.ಮೀನಾಕ್ಷಿಯವರ ಎಸ್.ಬಿ. ಖಾತೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಚಿಕ್ಕಮಗಳೂರು ಅಂಬೇಡ್ಕರ್ ರಸ್ತೆ ಶಾಖೆ ಉಳಿತಾಯ ಖಾತೆ ನಂ. 64204885112, 0041085. IFSC code: SBMY0041085 ಗೆ ಸಂದಾಯ ಮಾಡಬಹುದಾಗಿದೆ. ಅಗತ್ಯ ಬಿದ್ದರೆ ದೂರವಾಣಿ ಸಂಖ್ಯೆ: 9663095457, 9901551131 ಸಂಪರ್ಕಿಸಬಹುದು.







