ಗೂಂಡಾ ಕಾಯ್ದೆಯಡಿ ಪ್ರವೀಣ್ ಖಾಂಡ್ಯ ಬಂಧನ

ಚಿಕ್ಕಮಗಳೂರು, ಜ.29: ತೇಜಸ್ ಅಪಹರಣ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 33 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಖಾಂಡ್ಯ ಪ್ರವೀಣ್‌ನನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಗುಲ್ಬರ್ಗ ಜೈಲಿಗೆ ಕರೆದೊಯ್ದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ದೇವದಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾಂಡ್ಯ ಎಂಬಲ್ಲಿನ ಎಚ್.ಕೆ.ಪ್ರವೀಣ್ ಅಲಿಯಾಸ್ ಖಾಂಡ್ಯ ಪ್ರವೀಣ್ ಎಂಬ ಕುಖ್ಯಾತಿ ಹೊಂದಿರುವ ಈತನಿಗೆ ಜಿಲ್ಲೆಯಲ್ಲಿಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಂತೆ ಪೊಲೀಸ್ ಅಧಿಕಾರಿಗಳು ಈ ಮೊದಲು ಅನೇಕ ಸಲ ಎಚ್ಚರಿಕೆ ನೀಡಿದ್ದರು.
ಆದರೆ ಕ್ರಿಮಿನಲ್ ಚಟುವಟಿಕೆಯೊಂದಿಗಿನ ತನ್ನ ನಡವಳಿಕೆಯನ್ನು ಬದಲಾಯಿಸದ ಹಿನ್ನಲೆಯನ್ನು ಚಿಕ್ಕಮಗಳೂರು ಪೊಲೀಸರು ಆರೋಪಿ ಪ್ರವೀಣ್ ಖಾಂಡ್ಯ ವಿರುದ್ದ ವಿವರವಾದ ವರದಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ನೀಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
ಆರೋಪಿ ಮೇಲೆ ಕರ್ನಾಟಕ ಪ್ರಿವೇನ್ ಷನ್ ಅಫ್ ಡೆಂಜರಸ್ಸ್ ಅಕ್ಟಿವೀಟಿಸ್ ಅಫ್ ಬ್ರೂಟ್ ಲೇಗಸ್ರ್, ಡ್ರಗ್ ಅಫೆಂಡರ್ಸ್ , ಗ್ಯಾಂಬ್ಲರ್ಸ್,ಗೂಂಡಾಸ್, ಇಮ್ಯಾರಲ್ ಟ್ರಾಫಿಕ್ ಅಫೆಂಡರ್ಸ್ ಸ್ಲಂ ಗ್ರ್ಯಾಬರ್ಸ್ ಕಾಯ್ದೆ 1985 ಕಲಂ 3(2) ಮತ್ತು 05.12.2016ರಂತೆ ಜಿಲ್ಲಾ ದಂಡಾಧಿಕಾರಿಗೆ ಇರುವ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿಬಂಧನಾದೇಶವನ್ನು ಹೊರಡಿಸಲಾಗಿತ್ತು. ಅದರಂತೆ ಆರೋಪಿ ಎಚ್.ಕೆ.ಪ್ರವೀಣ್‌ನನ್ನು ಬಂಧಿಸಿರುವ ಪೊಲೀಸರು ಬೆಂಗಾವಲಿನಲ್ಲಿ ಗುಲ್ಬರ್ಗ ಜೈಲಿಗೆ ಕರೆದೊಯ್ಯಲಾಗಿದೆ.
ತೇಜಸ್ ಅಪಹರಣ ಹಾಗೂ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗರವರ ಆತ್ಮಹತ್ಯೆ ಪ್ರಕರಣದ ಸಂಬಂಧ ಪ್ರವೀಣ್ ಖಾಂಡ್ಯ ಪ್ರಮುಖ ಆರೋಪಿಯಾಗಿದ್ದನು. ಆತ್ಮಹತ್ಯೆ ಬಳಿಕ ತಲೆಮರಿಸಿಕೊಂಡಿದ್ದವನು ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದು ಚಿಕ್ಕಮಗಳೂರಿಗೆ ಆಗಮಿಸಿದ್ದ. ಗ್ರಾಮಾಂತರ ಠಾಣೆಯ ಪೋಲಿಸರು 2011ರಲ್ಲಿ ದತ್ತ ಜಯಂತಿ ನಡೆಯುವ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಕೆಲಸಕ್ಕೆ ಅಡಚಣೆ ಉಂಟು ಮಾಡಿದ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದಿಂದ ಹಲವು ಸಲ ನೋಟಿಸ್ ನೀಡಿದ್ದರೂ ಕೋರ್ಟ್‌ಗೆ ಹಾರಾಗಿರಲಿಲ್ಲ. ಹೀಗಾಗಿ ಈತನ ಬಂಧನವಾಗಿತ್ತು. ಬಂಧನದ ನಂತರ ಸಿಐಡಿ ಪೋಲಿಸರು ನ್ಯಾಯಾಲಯಕ್ಕೆಅರ್ಜಿ ಸಲ್ಲಿಸಿ ಜ.6 ರಿಂದ 16 ರವರೆಗೂ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದರು.ಅಂದಿನಿಂದ ಚಿಕ್ಕಮಗಳೂರು ಜೈಲಿನಲ್ಲಿದ್ದ ಪ್ರವೀಣ್ ಖಾಂಡ್ಯ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿ ಭಾನುವಾರ ಪೊಲೀಸ್ ಬೆಂಗಾವಲಿನಲ್ಲಿ ಗುಲ್ಬರ್ಗಾ ಜೈಲಿಗೆ ಕಳುಹಿಸಿದ್ದಾರೆ.
ಗೂಂಡಾಕಾಯ್ದೆಯ ಈ ಬಮಧನವು ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಇದು ಎಚ್ಚರಿಕೆಯ ಸಂದೇಶವಾಗಿದೆ ಎಂದು ಎಸ್ಪಿ ಕೆ.ಅಣ್ಣಾಮಲೈ ಎಚ್ಚರಿಕೆ ನೀಡಿದ್ದಾರೆ.







