ಕೋಡಿಜಾಲ್: ಮಸೀದಿ ಕಬರ್ ಸ್ಥಾನಕ್ಕೆ ಆಕಸ್ಮಿಕ ಬೆಂಕಿ

ಕೋಡಿಜಾಲ್, ಜ.29: ಇಲ್ಲಿನ ರಿಫಾಯಿಯ್ಯ ಮಸೀದಿ ಖಬರ್ ಸ್ಥಾನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ರವಿವಾರ ಮದ್ಯಾಹ್ನ ನಡೆದಿದೆ.
ಮಸೀದಿಯ ಖಬರ್ ಸ್ಥಾನ, ಪಕ್ಕದಲ್ಲಿರುವ ಗುಡ್ಡದಲ್ಲಿ ಮಧ್ಯಾಹ್ನ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತುಗೊಂಡ ಸ್ಥಳೀಯರು ಅಗ್ನಿ ಶಾಮಕ ದಳದ ನೆರವಿನಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
Next Story





