ತುಳು ಮಿನದನದ ಅಂಗವಾಗಿ ಸಾರ್ವಜನಿಕ ಕ್ರೀಡಾಕೂಟ

ಸುಳ್ಯ ,ಜ.29 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕುರಲ್ ತುಳು ಕೂಟ ದುಗ್ಗಲಡ್ಕ ಹಾಗೂ ಮಿತ್ರ ಯುವಕ ಮಂಡಲ ಕೊಕುಳಿ ಇದರ ಸಹಯೋಗದೊಂದಿಗೆ ಫೆಬ್ರವರಿ 4 ರಂದು ನಡೆಯುವ ಸುಳ್ಯ ತುಳು ಮಿನದ ಅಂಗವಾಗಿ ಸಾರ್ವಜನಿಕರಿಗೆ ಕ್ರೀಡಾಕೂಟ ನಡೆಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ನಡೆದ ಕ್ರೀಡಾಕೂಟವನ್ನು ವೆಂಕಟ್ರಮಣ ಸೊಸೈಟಿ ಉಪಾಧ್ಯಕ್ಷ ಪಿ.ಎಸ್.ಗಂಗಾಧರ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕೆ.ಟಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
ವಳಲಂಬೆ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಿತ್ರ ದೇವ ಮಡಪ್ಪಾಡಿ, ದುಗಲಡ್ಕ ದುಗಲಾಯ ದೈವಸ್ಥಾನ ಸಮಿತಿ ಅಧ್ಯಕ್ಷ ದಯಾನಂದ ಸಾಲ್ಯಾನ್, ಅಯ್ಯಪ್ಪ ಭಜನಾ ಮಂದಿರದ ಗೌರವಾಧ್ಯಕ್ಷ ಪ್ರಕಾಶ್ ರೈ ದುಗಲಡ್ಕ, ದುಗಲಡ್ಕ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಪದಾಧಿಕಾರಿಗಳಾದ ಸಿರಿಲ್ ಡಿಸೋಜಾ, ಸುರೇಶ್ ನಾಯಕ್, ಶಶಿಕಲಾ ನೀರಬಿದಿರೆ, ಆನಂದ ನೀರಬಿದಿರೆ, ವಸಂತ ನೀರಬಿದಿರೆ, ಮನೋಜ್ ಪಾನತ್ತಿಲ, ಭವಾನಿಶಂಕರ ಕಲ್ಮಡ್ಕ, ಜಯಶೀಲ ದುಗಲಡ್ಕ, ಗಿರಿಧರ ನಾಯರ್‌ಹಿತ್ಲು, ಜಯರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾಕೂಟದ ಅಂಗವಾಗಿ ಪುರುಷರ ವಿಭಾಗಕ್ಕೆ ತೆಂಗಿನಕಾಯಿ ಬಿಸಾಡುವುದು, ತೆಂಗಿನಕಾಯಿ ಕುಟ್ಟುವುದು, ಉರಲ್, ಗೋಣಿಚೀಲ ಓಟ, ಅಡಿಕೆ ಸುಲಿಯುವುದು, ಲಕ್ಕಿ ಸರ್ಕಲ್, ಮಹಿಳೆಯರ ವಿಭಾಗಕ್ಕೆ ತೆಂಗಿನಕಾಯಿ ಬಿಸಾಡುವುದು, ನೇಜಿಯ ಪದ ಹಾಡುವುದು, ಸೂಜಿಗೆ ನೂಲು ಹಾಕುವುದು, ಬೀಡಿ ಕಟ್ಟುವುದು, ತುಳು ಜನಪದ ಹಾಡು, ಹೂ ಕಟ್ಟುವುದು, ಲಕ್ಕಿ ಸರ್ಕಲ್ ಕಾರ್ಯಕ್ರಮಗಳು ನಡೆಯಿತು.







