ಅಕ್ಷರ ರಿಪಬ್ಲಿಕ್ ಮೀಟ್ ಕಾರ್ಯಕ್ರಮ

ಮಂಗಳೂರು, ಜ.29: ಅಕ್ಷರ ಇ-ಮ್ಯಾಗಝಿನ್ ವತಿಯಿಂದ ರಿಪಬ್ಲಿಕ್ ಮೀಟ್ ಅಂಗವಾಗಿ ಕವಿಗೋಷ್ಠಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅಂಗವಿಕಲ ದೇಹರ್ದಾಢ್ಯ ಪಟು ಜಗದೀಶ್ ಪೂಜಾರಿಗೆ ಹಾಗೂ ರಾಜ್ಯ ಹಜ್ ಕಮಿಟಿಯ ನೂತನ ಸದಸ್ಯರಾಗಿ ಆಯ್ಕೆಗೊಂಡ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಿದ್ದೀಕ್ ಮೋಂಟುಗೋಳಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಅಕ್ಷರ ಇ-ಮ್ಯಾಗಝಿನ್ ಪ್ರಧಾನ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಯೀಲ್ ಅಧ್ಯಕ್ಷತೆ ವಹಿಸಿದರು.
ಟ್ಯಾಲೆಂಟ್ ಫೌಂಡೇಶನ್‌ನ ಸಲಹೆಗಾರ ರಫೀಕ್ ಮಾಸ್ಟರ್ ರಿಪಬ್ಲಿಕ್ ಸಂದೇಶ ನೀಡಿದರು.
ಎಂ. ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೊಳ್ತಮಜಲು, ರಶೀದ್ ವಿಟ್ಲ, ಅಝೀಝ್ ಝುಹ್ರಿ ಪುಣಚ, ಶಾಫಿ ಮಿಸ್ಬಾಹಿ ಬಜಾಲ್, ಕಬೀರ್, ಆಶಿಕ್ ಕುಕ್ಕಾಜೆ, ಶಾಕಿರ್ ಎಮ್ಮೆಸ್ಸಿ, ಸಿ.ಎಂ. ಹನೀಫ್ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.
ಎಂ.ಎಂ. ಆತೂರು ಸ್ವಾಗತಿಸಿದರು. ಯಂಶ ಬೇಂಗಿಲ ವಂದಿಸಿದರು.
Next Story





