ನಕ್ಸಲರಿಂದ ಸಾವಿರ ವರ್ಷ ಹಳೆಯ ಗಣಪತಿ ವಿಗ್ರಹ ಭಗ್ನ

ರಾಯ್‌ಪುರ, ಜ.29: ಛತ್ತೀಸ್‌ಗಡದ ದಾಂಟೆವಾಡ ಜಿಲ್ಲೆಯ ಧೋಲ್‌ಕಲ್ ದಟ್ಟಾರಣ್ಯ ಪ್ರದೇಶದ ಗುಡ್ಡದ ಮೇಲೆ ಇರುವ ಸಾವಿರ ವರ್ಷ ಪುರಾತನವಾದ ಗಣೇಶ ನ ವಿಗ್ರಹವನ್ನು ನಕ್ಸಲರು ಭಗ್ನಗೊಳಿಸಿದ್ದಾರೆ . ಭಗ್ನಗೊಳಿಸಿದ ಗಣೇಶನ ಮೂರ್ತಿಯನ್ನು ಬೆಟ್ಟದ ಕೆಳಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
9 ಅಥವಾ ಹತ್ತನೇ ಶತಮಾನದಲ್ಲಿ ನಾಗವಂಶಿ ರಾಜವಂಶದವರು ನಿರ್ಮಿಸಿದ್ದಾರೆ ಎನ್ನಲಾದ 4 ಅಡಿ ಎತ್ತರದ ಈ ಗಣೇಶನ ವಿಗ್ರಹವನು ್ನ ಧೋಲ್‌ಕಲ್ ಎಂದು ಕರೆಯಲಾಗುವ ಬೆಟ್ಟಶ್ರೇಣಿಯ ಮೇಲೆ ನಿರ್ಮಿಸಲಾಗಿದೆ. ರಾಯ್‌ಪುರದಿಂದ ಸುಮಾರು 450 ಕಿ.ಮೀ. ದೂರದಲ್ಲಿರುವ ದಟ್ಟಾರಣ್ಯದ ಒಳಗಡೆ 14 ಕಿ.ಮೀ. ಕ್ರಮಿಸಿದರೆ ಈ ಬೆಟ್ಟಶ್ರೇಣಿಯನ್ನು ತಲುಪುಬಹುದು. ಈ ಬೆಟ್ಟಶ್ರೇಣಿಯನ್ನು ತಲುಪಬೇಕಾದರೆ ಕಾಲ್ನಡಿಗೆಯಲ್ಲೇ ಸಾಗಬೇಕು. ವಿಗ್ರಹವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಆಗಮಿಸುವುದರಿಂದ ಹತಾಶೆಗೊಂಡಿರುವ ನಕ್ಸಲರು ವಿಗ್ರಹವನ್ನು ಭಗ್ನಗೊಳಿಸಿರುವ ಶಂಕೆಯಿದೆ ಎಂದು ಪೊಲೀಸ್ ಸುಪರಿಂಟೆಂಡೆಂಟ್ ಕಾಮಲೋಚನ್ ಕಶ್ಯಪ್ ತಿಳಿಸಿದ್ದಾರೆ.
ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಶಂಕಿತ ನಕ್ಸಲರ ಚಲನವಲನವನ್ನು ಕಂಡಿರುವುದಾಗಿ ಸ್ಥಳೀಯರು ತಿಳಿಸಿರುವುದು ಈ ಶಂಕೆಗೆ ಪುಷ್ಟಿ ನೀಡಿದೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಛತ್ತೀಸ್‌ಗಡದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ದಯಾಳ್‌ದಾಸ್ ಬಾೆಲ್ ತಿಳಿಸಿದ್ದಾರೆ.





