ತುಳು ಚಲನಚಿತ್ರದಲ್ಲಿ ನಟಿಸುವ ಆಸೆ ಇದೆ : ಬಾಲಿವುಡ್ ನಟ ಸೋನು ಸೂದ್
ಮಂಗಳೂರಿನಲ್ಲಿ ಬಾಲಿವುಡ್ ನಟ ಸೋನು ಸೂದ್

ಮಂಗಳೂರು , ಜ.29 : ತುಳು ಚಲನಚಿತ್ರದಲ್ಲಿ ನಟಿಸುವ ಆಸೆ ಇದೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದಾರೆ .
ಜಾಕಿ ಚಾನ್ ನಾಯಕತ್ವದ ಚಿತ್ರ ‘ಕುಂಗ್ ಫು ಯೋಗ ’ ಚಿತ್ರದ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ ನಟ ಸೋನು ಸೂದ್ ತುಳುವಿನ ಬಗ್ಗೆ ತನಗಿರುವ ಆಭಿಮಾನವನ್ನು ವ್ಯಕ್ತಪಡಿಸಿದರು .
ಕುಂಗ್ ಫು ಯೋಗ ಚಿತ್ರವು ಭಾರತೀಯ ಕಥೆ ಹೊಂದಿದೆ. ಮಾರ್ಷಲ್ ಆರ್ಟ್ ಪಟ್ಟುಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿದ್ದು , ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ ಎಂದು ತಿಳಿಸಿದರು .
ನಟ ಜಾಕಿ ಚಾನ್ ಬಗ್ಗೆ ಮಾತನಾಡುತ್ತಾ , ಜಾಕಿ ಚಾನ್ ಮೇರು ನಟ . ಅವರ ಜೊತೆ ನಟಿಸುವುದು ಖುಷಿ ಕೊಟ್ಟಿದೆ . ಒಂದು ತಿಂಗಳ ಶೂಟಿಂಗ್ ವೇಳೆ ಸಾಕಷ್ಟು ಕಲಿತೆ ಎಂದು ಹೇಳಿದರು .
ಅಭಿಮಾನಿಗಳನ್ನು ನೋಡಿ ಪುಳಕಿತರಾದ ಬಾಲಿವುಡ್ ನಟ ದಬಾಂಗ್ ಚಿತ್ರದ ಡೈಲಾಗ್ ಹೇಳಿ ರಂಜಿಸಿದರು .
Next Story





