ರಥಬೀದಿ ಸರಕಾರಿ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಂಗಳೂರು, ಜ. 29: ಸರಕಾರಿ ಪ್ರಥಮ ದರ್ಜೆಕಾಲೇಜು ರಥಬೀದಿ, ಯುವ ರೆಡ್‌ಕ್ರಾಸ್ ಘಟಕ, ರೆಡ್‌ರಿಬ್ಬನ್, ರಾ.ಸೇ.ಯೋ, ರೋವರ್ಸ್ ಹಾಗೂ ರೆಂಜರ್ಸ್ ಹಾಗೂ ಲಯನ್ಸ್‌ಕ್ಲಬ್ ಬೆಂದೂರುವೆಲ್ ಇದರ ಸಹಯೋಗದಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು.
ಮುಖ್ಯಅತಿಥಿಯಾಗಿ ಲಯನ್ಸ್ ಕ್ಲಬ್‌ನ ಪ್ರಾದೇಶಿಕ ಅಧ್ಯಕ್ಷ ಲಯನ್ ಶಶಿಧರ್ ಮಾರ್ಲಾ ರಕ್ತದಾನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಜಶೇಖರ್ ಹೆಬ್ಬಾರ್ ಸಿ. ವಹಿಸಿದ್ದರು.
ರೆಡ್‌ಕ್ರಾಸ್ ಘಟಕಾಧಿಕಾರಿ ಮಹೇಶ್ ಕೆ. ಬಿ., ಹಿಂದಿ ವಿಭಾಗದ ಮುಖ್ಯಸ್ಥ ರುಡಾ ಶಿವರಾಮ್, ಜಯ ಅಂಥನಿ, ಲಯನ್ ನಾಗೇಶ್ ಕುಮಾರ್ ಎನ್.ಜೆ., ಲಯನ್ ಕೇಶವ್, ಲಯನ್ ದಿರಣ, ಲಯನ್ ಅನಂತ ಶೇಟ್, ಲಯನ್ ನರೇಶ್‌ಕುಮಾರ, ಲಯನ್ ಮೋಹನ್ ಪಡೀಲ್, ಲಯನ್ ವಿಟ್ಲ ಶೆಟ್, ನಡ್ವರ್ಡ್ ವಾಸ್ ಮತ್ತಿತರರು ಉಪಸ್ಥಿತರಿದ್ದರು.
Next Story





