ಇನ್‌ಲ್ಯಾಂಡ್ ಸಿಯೋನ್ ವಸತಿ ಸಮುಚ್ಚಯ ಉದ್ಘಾಟನೆ

ಮಂಗಳೂರು, ಜ.29: ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಪ್ರೈ.ಲಿಮಿಟೆಡ್ ವತಿಯಿಂದ ನಗರದ ಫಳ್ನೀರ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಇನ್‌ಲ್ಯಾಂಡ್ ಸಿಯೋನ್ ವಸತಿ ಸಮುಚ್ಚಯ ಇಂದು ಉದ್ಘಾಟನೆಗೊಂಡಿತು.
ಮುಖ್ಯ ಟ್ರಾಫಿಕ್ ವಾರ್ಡನ್ ಜೋ ಗೊನ್ಸಾಲ್ವಿಸ್ ನೂತನ ವಸತಿ ಸಮುಚ್ಚಯವನ್ನು ಉದ್ಘಾಟಿಸಿದರು.
ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್ ಅಬ್ದುಲ್ ರವೂಫ್, ಕ್ರೆಡೈ ಅಧ್ಯಕ್ಷ ಡಿ.ಬಿ. ಮೆಹ್ತಾ, ಜಗದೀಶ್ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದು , ಇನ್‌ಲ್ಯಾಂಡ್ ನಿರ್ಮಾಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ನಿರ್ದೇಶಕರಾದ ಮೆರಾಜ್ ಯೂಸುಫ್ ಉಪಸ್ಥಿತರಿದ್ದರು.
‘ಇನ್‌ಲ್ಯಾಂಡ್ ಸಿಯೋನ್’ ಉನ್ನತ ದರ್ಜೆಯ ಅತ್ಯಾಧುನಿಕ ಸೌಲಭ್ಯಗಳ ಉತ್ಕೃಷ್ಟ ಗುಣಮಟ್ಟದ ಐಶಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಐದು ಅಂತಸ್ತುಗಳ ಈ ವಸತಿ ಸಮುಚ್ಚಯದಲ್ಲಿ 3 ಬಿಎಚ್‌ಕೆಗಳ 25 ಫ್ಲಾಟ್‌ಗಳು ಲಭ್ಯವಿದೆ. ವಿಶಾಲವಾದ ಲಾಬಿ, ಸಂದರ್ಶಕರ ಲಾಂಜ್, ಜಿಮ್ನಾಶಿಯಂ, ವೀಡಿಯೊಡೋರ್ ಫೋನ್ ಸಿಸ್ಟಮ್, ಸಿಸಿ ಟಿವಿ, ಪ್ರತೀ ಫ್ಲಾಟ್‌ಗಳಲ್ಲಿ ತ್ಯಾಜ ಸಂಸ್ಕರಣಾ ವಿಲೇವಾರಿ ವ್ಯವಸ್ಥೆ, ಮಕ್ಕಳ ಆಟದ ತಾಣ, ಡಬಲ್ ಎಲಿವೇಟರ್ ಹಾಗೂ ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.








