ಎಂಡೋಸಲ್ಫಾನ್ ಸಂತ್ರಸ್ತ ಯವಕನ ಸಾವು

ಕಾಸರಗೋಡು , ಜ.29 : ಎಂಡೋಸಲ್ಫಾನ್ ಕೀಟನಾಶಕ ಸಿಂಪಡಣೆ ದುಷ್ಪರಿಣಾಮಕ್ಕೆ ತುತ್ತಾಗಿದ್ದ ಯುವಕನೋರ್ವ ಮೃತಪಟ್ಟ ಘಟನೆ ಮಧೂರುನಲ್ಲಿ ನಡೆದಿದೆ.
ಮಧೂರು ಪಾಂಡಿಪಳ್ಳ ಬಾಲಕೃಷ್ಣ (27) ಮೃತಪಟ್ಟವರು.
ಇವರು ಜನ್ಮ೦ದಿನಿಂದಲೇ ವೈಕಲ್ಯಕ್ಕೆ ತುತ್ತಾಗಿ ಬೆಳವಣಿಗೆ ಕುಂಠಿತಗೊಂಡು ಹಾಸಿಗೆ ಹಿಡಿದಿದ್ದರು.
ಪೆರ್ಲ ಎಣ್ಮಕಜೆ ದೇಶಮೂಲೆ ಎಂಬಲ್ಲಿ ಹುಟ್ಟಿದ ಬಾಲಕೃಷ್ಣ ರವರು ಬಟ್ಯ - ಲಕ್ಷ್ಮಿ ದಂಪತಿಗೆ ಏಕೈಕ ಪುತ್ರ. ಆದರೆ ಹುಟ್ಟಿನಿಂದಲೇ ವೈಕಲ್ಯಕ್ಕೆ ತುತ್ತಾದ ಈತನಿಗಾಗಿ ಲಕ್ಷಾಂತರ ರೂ . ಗಳನ್ನು ಚಿಕಿತ್ಸೆಗಾಗಿ ವೆಚ್ಚ ಮಾಡಿದ್ದಾರೆ.
ಆಸ್ಪತ್ರೆಗೆ ತೆರಳಲು ಸೂಕ್ತ ರಸ್ತೆ ಇಲ್ಲದಿರುವುದರಿಂದ ಕೆಲ ವರ್ಷಗಳ ಹಿಂದೆ ಮಧೂರಿಗೆ ವಾಸ ಬದಲಾಯಿಸಿದ್ದರು. ಎಂಡೋಸಲ್ಫಾನ್ ಸಂತ್ರಸ್ಥ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳದಿರುವುದರಿಂದ ಸರಕಾರದಿಂದ ಸವಲತ್ತು ಲಭಿಸುತ್ತಿರಲಿಲ್ಲ. ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಸಂತ್ರಸ್ಥ ಯಾದಿಯಲ್ಲಿ ಹೆಸರು ಸೇರ್ಪಡೆಗೊಳಿಸರಲಿಲ್ಲ.
ಕೆಲ ದಿನಗಳ ಹಿಂದೆ ರೋಗ ಉಲ್ಬಣಗೊಂಡು , ಪರಿಯಾರಂ ನ ವೈದ್ಯಕೀಯ ಆಸ್ಪತ್ರೆಯಲ್ಲಿ ಮೃತಪಟ್ಟರು .





