ವಾಹನ ಸಮೇತ 5 ಲಕ್ಷ ರೂ. ಮೌಲ್ಯದ ಸಾಗುವಾನಿ ವಶ
ಮುಂಡಗೋಡ, ಜ.29: ತಾಲೂಕಿನ ಕ್ಯಾತ್ನಳ್ಳಿ ಅರಣ್ಯ ಪ್ರದೇಶದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸಲು ಬಚ್ಚಿಟ್ಟಿದ್ದ 5 ಲಕ್ಷ ರೂ. ಮೌಲ್ಯದ ಸಾಗುವಾನಿ ಕಟ್ಟಿಗೆಯನ್ನು ರವಿವಾರ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ವಶಪಡಿಸಿಕೊಂಡ ಘಟನೆ ನಡೆದಿದೆ.
ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ, ಸಿಬ್ಬಂದಿಯಾದ ಬೋಜು ಚವ್ಹಾಣ, ಸಿದ್ದು, ರೇವಣ್ಣ ಬಿರಾದಾರ, ಅಬ್ದುಲ್, ನಾಸಿರ್, ದೊಂಡು, ಸುರೇಶ, ನಾರಾಯಣ ಇದ್ದರು.
ಸಾಗುವಾನಿ ಕಟ್ಟಿಗೆ ಮತ್ತು ವಾಹನವನ್ನು (ವಾಹನ ನಂ. ಕೆ.ಎ.20ಎ 8562) ಅರಣ್ಯ ಇಲಾಖೆಯ ವಶದಲ್ಲಿದ್ದು, ಆರೋಪಿಗಳ ಪತ್ತೆಗೆ ಶೋಧನಾ ಕಾರ್ಯ ನಡೆದಿದೆ.
Next Story





