ಹಾಲಿಗೆ 1 ರೂ., ಪಶು ಆಹಾರಕ್ಕೆ 500 ರೂ. ಹೆಚ್ಚುವರಿ ಪ್ರೋತ್ಸಾಹಧನ

ಮಂಗಳೂರು, ಜ.29: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕುವ ಸದಸ್ಯರಿಗೆ ಫೆಬ್ರವರಿ 1ರಿಂದ ಮಾರ್ಚ್ 31ರವರೆಗೆ ಪ್ರತೀ ಲೀಟರ್ ಹಾಲಿಗೆ 1 ರೂ. ಹಾಗೂ ಪ್ರತೀ ಟನ್ ಪಶು ಆಹಾರಕ್ಕೆ 500 ರೂ.ನಂತೆ ಪ್ರೋತ್ಸಾಹಧನ ಸಿಗಲಿದೆ.
ಉಭಯ ಜಿಲ್ಲೆಗಳಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ನೀಡುತ್ತಿರುವ ಪ್ರತೀ ಲೀಟರ್ ಹಾಲಿಗೆ (ಶೇ.3.5 ಫ್ಯಾಟ್ ಮತ್ತು ಶೇ.8.5 ಎಸ್‌ಎನ್‌ಎಫ್) 27.17 ರೂ.ಗೆ 1 ರೂ. ಹೆಚ್ಚುವರಿಯಾಗಿ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ
Next Story





